News Karnataka Kannada
Monday, April 29 2024
ವಿದೇಶ

ನಿಮಲ್ಲಿ ಟ್ಯಾಲೆಂಟ್‌ ಇದ್ಯ ನಿಮಗೆ ಸಿಗುತ್ತೆ ಯುಎಇ ಪೌರತ್ವ

You will get uae citizenship if you have talent
Photo Credit : News Kannada

ಯುಎಇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹತ್ವವಾದ ಹೆಜ್ಜೆಯೊಂದನ್ನು ಇರಿಸಿದೆ. ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಕಲಾವಿದರು, ಲೇಖಕರು, ಹೂಡಿಕೆದಾರರು, ವಿಶೇಷ ಪ್ರತಿಭೆಗಳು ಮತ್ತು ವೃತ್ತಿಪರರಿಗೆ ಯುಎಇ ಪೌರತ್ವ ನೀಡಲು ಅನುಮತಿಸುವ ಕಾನೂನಿಗೆ ತಿದ್ದುಪಡಿಗೆ ಯುಎಇ ಮುಂದಾಗಿದೆ.

ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರು ಶನಿವಾರ ಘೋಷಿಸಿದ ಹೊಸ ಪ್ರಕ್ರಿಯೆಯಲ್ಲಿ ಎಮಿರೇಟ್ಸೇತರರು ಮೊದಲ ಬಾರಿಗೆ ಎಮಿರೇಟ್ಸ್‌ ಪೌರತ್ವ ಪಡೆಯಬಹುದಾಗಿದೆ.

ಯುಎಇ ಪೌರತ್ವದೊಂದಿಗೆ ಮೂಲ ದೇಶದ ಪೌರತ್ವ ಪಡೆಯುಬಹುದಾದ ದ್ವಿಪೌರತ್ವಕ್ಕೂ ಅವಕಾಶ ಕಲ್ಪಿಸಲಾಗಿದೆ. ಸಾಧಾರಣವಾಗಿ ಗಲ್ಫ್‌ನಲ್ಲಿ ಪೌರತ್ವವನ್ನು ವಿದೇಶಿಯರಿಗೆ ನೀಡಲಾಗುವುದಿಲ್ಲ. ಈ ಹೊಸ ನಿಯಮ ವಿದೇಶಿಯರಿಗೂ ಪೌರತ್ವ ಒದಗಿಸಲಿದೆ. ಆದರೆ ಈ ಹೊಸ ನಿಯಮಗಳಲ್ಲಿ ತೊಂದರೆಯೊಂದಿದೆ. ಅಲ್ಲಿನ ಸರ್ಕಾರ ನುರಿತ ವೃತ್ತಿಪರರನ್ನು ಸರ್ಕಾರ ಅಥವಾ ರಾಜಮನೆತನದ ಅಧಿಕಾರಿಗಳು ನಾಮನಿರ್ದೇಶನ ಮಾಡಿದಲ್ಲಿ ಮಾತ್ರ ಪೌರತ್ವ ಪಡೆಯಬಹುದು. ನಾಮನಿರ್ದೇಶಿತರನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದನ್ನು ಸರ್ಕಾರ ಇನ್ನೂ ತಿಳಿಸಿಲ್ಲ.

ವಿಶೇಷ ಪೌರತ್ವ ಪಡೆಯುವವರ ಕುಟುಂಬದವರೂ ಕೂಡ ಅಲ್ಲಿನ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ವಿಶೇಷ ಪ್ರತಿಭೆಗಳು ಮತ್ತು ವೃತ್ತಿಪರರಿಗೆ ಯುಎಇ ಪೌರತ್ವವನ್ನು ನೀಡಲು ನಾವು ಕಾನೂನು ತಿದ್ದುಪಡಿಗಳನ್ನು ಅಂಗೀಕರಿಸಿದ್ದೇವೆ ಎಂದು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಶನಿವಾರ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು