Categories: ವಿದೇಶ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಉತ್ತರಾಧಿಕಾರಿ ಮುಖವನ್ನೊಮ್ಮೆ ನೋಡಿ

ಸಿಯೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಅವರ ಮಗಳು ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈಕೆ ಕಿಮ್‌ ಉತ್ತರಾಧಿಕಾರಿ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಚಿಂತಕರ ಚಾವಡಿ ಹೇಳಿದೆ.

ಸಿಯೋಲ್‌ನಲ್ಲಿರುವ ಕೊರಿಯಾ ಇನ್‌ಸ್ಟಿಟ್ಯೂಟ್ ಫಾರ್ ನ್ಯಾಶನಲ್ ಯೂನಿಫಿಕೇಶನ್‌ನ ಮುಖ್ಯಸ್ಥ ಕೊಹ್ ಯು-ಹ್ವಾನ್ ಅವರ ಹೇಳಿಕೆಗಳನ್ನು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ವಿಶ್ಲೇಷಿಸಿದ್ದು, ಆಕೆ ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗಬಹುದೆಂದು ಹೇಳಿದೆ.

ದಕ್ಷಿಣ ಕೊರಿಯಾ ರಾಷ್ಟ್ರೀಯ ಗುಪ್ತಚರ ಸೇವೆಯು ಕಿಮ್‌ಗೆ ಮೂವರು ಮಕ್ಕಳಿದ್ದಾರೆ ಎಂದು ಹೇಳಿದೆ. ಅಲ್ಲದೆ ಮೊದಲನೆಯವನು ಪುತ್ರ ಎಂದು ಹೇಳಿದೆ. ಆದರೆ ಮೂರನೆ ಮಗು ಹೆಣ್ಣೋ ಗಂಡೋ ಎಂಬುದು ದೃಢಗೊಂಡಿಲ್ಲ ಎಂದಿದೆ.

ಪ್ರಸ್ತುತ ಕಿಮ್‌ ಉತ್ತರಾಧಿಕಾರಿಯಾಗಿ ಜು-ಎ (ಪುತ್ರಿ) ಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಕೆಗೆ ಈಗ 10 ವರ್ಷ ಎಂದು ನಂಬಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಬಾರಿ ಈಕೆ ತಂದೆಯೊಂದಿಗೆ ಖಂಡಾಂತರ ಕ್ಷಿಪಣಿ ಪರೀಕ್ಷೆ ವೇಳೆ ಹಾಜರಾಗಿದ್ದರು. ಉತ್ತರ ಕೊರಿಯಾದಲ್ಲಿ ಪಿತೃಪ್ರಭುತ್ವ ಪದ್ಧತಿ ಅಸ್ತಿತ್ವದಲ್ಲಿದೆ. ಆದರೆ ಹಿರಿಯ ಮಗನ ಅಸ್ತಿತ್ವದ ಬಗ್ಗೆ ಗೊಂದಲವಿರುವ ಕಾರಣ ಈಕೆ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಚಿಂತಕರು ಹೇಳಿದ್ದಾರೆ.

Sneha Gowda

Recent Posts

ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತೀರಿ: ಮೋದಿಗೆ ಓವೈಸಿ ಪ್ರಶ್ನೆ

ಮುಸ್ಲಿಮರು ಶೀಘ್ರದಲ್ಲೇ ಬಹುಸಂಖ್ಯಾತರಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಇನ್ನೂ ಹಿಂದೂಗಳಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಲ್ ಇಂಡಿಯಾಮಜ್ಲಿ ಸ್-ಎ-ಇತ್ತೆಹಾದುಲ್…

13 mins ago

ಛತ್ತೀಸ್‌ಗಢದಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ದುರ್ಮರಣ, 23 ಮಂದಿಗೆ ಗಾಯ

ಛತ್ತೀಸ್‌ಗಢದ ಬೆಮೆತಾರಾದ ಕಥಿಯಾ ಪೆಟ್ರೋಲ್ ಪಂಪ್ ಬಳಿ ಪಿಕಪ್ ಟ್ರಕ್ ರಸ್ತೆ ಬದಿ ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ…

34 mins ago

ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು: ವಿಡಿಯೋ ವೈರಲ್‌

ತಮಿಳುನಾಡಿನ ಚೆನ್ನೈನ ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ  ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಏಳು ತಿಂಗಳ ಮಗುವೊಂದು ವಿಂಡೋ ಪೋರ್ಚ್‌  ಮೇಲೆ ಬಿದ್ದ ಘಟನೆ ನಡೆದಿದೆ. 

51 mins ago

ಸೋನಾಮಾರ್ಗ್‌ನಲ್ಲಿ ಸ್ಕಿಡ್​ ಆಗಿ ನದಿಗೆ ಉರುಳಿದ ಕಾರು: 4 ಜನರ ಸಾವು

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ  ಒಂಭತ್ತು ಜನ ಪ್ರಯಾಣ ಮಾಡುತ್ತಿದ್ದ ಟವೇರಾ ಎಸ್‌ಯುವಿ ಕಾರ್ ನಿಯಂತ್ರಣ ತಪ್ಪಿ  ಸಿಂಧ್ ನದಿಗೆ…

1 hour ago

ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ: ಆರು ಜನರ ದುರ್ಮರಣ

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರದಲ್ಲಿ ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ  ನಡೆದಿದೆ.

2 hours ago

ಮತ್ತೊಂದು ಲವ್ ಜಿಹಾದ್ ಪ್ರಕರಣ: ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ

ಹುಬ್ಬಳ್ಳಿಯಲ್ಲಿ  ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

2 hours ago