News Karnataka Kannada
Wednesday, May 01 2024
ವಿದೇಶ

ಉಕ್ರೇನ್‌ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ: 8 ಮಂದಿ ಸಾವು

Russia launches
Photo Credit : News Kannada

ಕೈವ್: ಉಕ್ರೇನ್‌ ಮೇಲೆ ರಷ್ಯಾ ಮತ್ತೆ ತನ್ನ ದಾಳಿ ಮುಂದುವರೆಸಿದೆ. ರಷ್ಯಾದ ಎರಡು ಕ್ಷಿಪಣಿಗಳು ಡೊನೆಟ್ಸ್ಕ್ ಪ್ರದೇಶದ ಪೂರ್ವ ಉಕ್ರೇನಿಯನ್ ನಗರವಾದ ಪೊಕ್ರೊವ್ಸ್ಕ್ನಲ್ಲಿ ವಸತಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ತೀವ್ರವಾಗಿ ಹಾನಿಗೊಳಗಾದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದ ವಿಡಿಯೋ ಮತ್ತು ಚಿತ್ರಗಳನ್ನು ಉಕ್ರೇನ್‌ನ ಅಧಿಕಾರಿಗಳು ಸೋಮವಾರ ಬಿಡುಗಡೆ ಮಾಡಿದ್ದು, ಗಾಯಾಳುಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡ 31 ಮಂದಿಯಲ್ಲಿ ಉಕ್ರೇನಿಯನ್ ಭದ್ರತಾ ಸೇವೆಗಳ ಹತ್ತು ಸದಸ್ಯರು ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಇಡೀ ಜಗತ್ತು ಒಂದಾಗಿದೆ. ಇದೇ ವೇಳೆ ಶಾಂತಿ ಮಾತುಕತೆಗೆ ಮೀಟಿಂಗ್ ಕೂಡ ಶುರುವಾಗಿದೆ. ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾರತ ಕೂಡ ಪ್ರಮುಖ ಪಾತ್ರ ವಹಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು