News Karnataka Kannada
Tuesday, April 30 2024
ವಿದೇಶ

ತೈವಾನ್‌ ಗೆ ಸ್ವತಂತ್ರ ದೇಶದ ಮಾನ್ಯತೆ ಬೇಡ ಎಂದ ನೇಪಾಳ

Nepal says Taiwan does not want to be recognised as an independent country
Photo Credit : News Kannada

ಕಠ್ಮಂಡು: ತೈವಾನ್‌ ಗೆ ಸ್ವತಂತ್ರ ದೇಶದ ಮಾನ್ಯತೆ ನೀಡುವುದನ್ನು ನೇಪಾಳ ವಿರೋಧಿಸಿದೆ. ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಚೀನಾಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ನೇಪಾಳವು ಏಕ-ಚೀನಾ ತತ್ವಕ್ಕೆ ತನ್ನ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ.

ತೈವಾನ್ ಚೀನಾದ ಬೇರ್ಪಡಿಸಲಾಗದ ಭಾಗವಾಗಿದೆ. ನೇಪಾಳಿ ಆಡಳಿತವು “ತೈವಾನ್ ಸ್ವಾತಂತ್ರ್ಯದ” ವಿರುದ್ಧವಾಗಿದೆ ಎಂದು ಹೇಳಿದೆ. ಸೋಮವಾರ, ದಹಾಲ್ ತನ್ನ ಚೀನೀ ಸಹವರ್ತಿ ಲಿ ಕಿಯಾಂಗ್ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳ ಸಹಕಾರಕ್ಕೆ ಸಂಬಂಧಿಸಿದ ವಿವಿಧ 12 ಒಪ್ಪಂದಗಳಿಗೆ ಸಹಿ ಹಾಕಿದರು.

ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಶಾಶ್ವತ ಸ್ನೇಹವನ್ನು ಒಳಗೊಂಡಿರುವ ಚೀನಾ-ನೇಪಾಳದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸಲು ದಹಾಲ್ ಅವರ ಭೇಟಿ ಮಹತ್ವದ್ದಾಗಿದೆ ಎಂದು ಚೀನಾ ಹೇಳಿದೆ. ಅಲ್ಲದೆ ಚೀನಾದ ಒನ್‌ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಗೆ ನೇಪಾಳ ಸಹಕಾರ ಒದಗಿಸುವುದಾಗಿ ಹೇಳಿದೆ.

ಒನ್‌ ಬೆಲ್ಟ್‌ ಮತ್ತು ಒನ್‌ ರೋಡ್ ಸಹಕಾರ ಗಟ್ಟಿಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಬಂದರುಗಳು, ರಸ್ತೆಗಳು, ರೈಲುಮಾರ್ಗಗಳು, ವಾಯುಮಾರ್ಗ ಗಟ್ಟಿಗೊಳಿಸಲು ಬಿಆರ್‌ ಐ ಅನಿವಾರ್ಯ ಎಂದು ಜಂಟಿ ಹೇಳಿಕೆ ಪುನರುಚ್ಚರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು