ಕೀವ್: ಉಕ್ರೇನ್ ತನ್ನ 31ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಂತೆ, ಮಧ್ಯ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದ ಚಾಪ್ಲಿನ್ ರೈಲು ನಿಲ್ದಾಣದ ಮೇಲೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಮಾಹಿತಿಯ ಪ್ರಕಾರ ಶೆಲ್ ದಾಳಿಯಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂದು ನಮ್ಮ ನಮ್ಮ ಮುಖ್ಯ ದಿನವಾದ ಉಕ್ರೇನ್ ಸ್ವಾತಂತ್ರ್ಯ ದಿನವು ಕೊನೆಗೊಳ್ಳುತ್ತಿದೆ. ಆದರೆ ನಮ್ಮ ಸ್ವಾತಂತ್ರ್ಯವು ಕೊನೆಗೊಳ್ಳುವುದಿಲ್ಲ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ” ಎಂದು ಜೆಲೆನ್ಸ್ಕಿ ಹೇಳಿದರು.
ಯುದ್ಧದ ಸಮಯದಲ್ಲಿ ರೈಲು ನಿಲ್ದಾಣಗಳು ಮತ್ತು ರೈಲು ಮೂಲಸೌಕರ್ಯಕ್ಕೆ ಪದೇ ಪದೇ ಹೊಡೆತ ಬಿದ್ದಿದೆ. ಏಪ್ರಿಲ್ ನಲ್ಲಿ ಪೂರ್ವ ಡಾನ್ಬಾಸ್ ಪ್ರದೇಶದ ಕ್ರಾಮಟರ್ಸ್ಕ್ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 57 ಜನರು ಮೃತಪಟ್ಟಿದ್ದರು.
ಮಂಗಳವಾರ, ಸ್ವಾತಂತ್ರ್ಯ ದಿನದಂದು ರಷ್ಯಾದಿಂದ ಭಾರಿ ಶೆಲ್ ದಾಳಿ ಮತ್ತು ಸಂಭಾವ್ಯ ಪ್ರಚೋದನೆಗಳ ವಿರುದ್ಧ ಝೆಲೆನ್ಸ್ಕಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದರು.
ಉಕ್ರೇನ್ ನಾಗರಿಕ ಮೂಲಸೌಕರ್ಯ ಮತ್ತು ಸರ್ಕಾರಿ ಸೌಲಭ್ಯಗಳ ಮೇಲೆ ಹೆಚ್ಚಿನ ದಾಳಿಗಳನ್ನು ನಡೆಸಲು ರಷ್ಯಾ ವಾರ್ಷಿಕೋತ್ಸವವನ್ನು ಬಳಸಬಹುದು ಎಂದು ಯುಎಸ್ ದಿನಾಂಕಕ್ಕೂ ಮುಂಚಿತವಾಗಿ ಎಚ್ಚರಿಕೆ ನೀಡಿತ್ತು.