ಕೌಲಾಲಂಪುರ್: ಮಲೇಷ್ಯಾ ಗುರುವಾರ ತನ್ನ 66 ನೇ ಸ್ವಾತಂತ್ರ್ಯ ದಿನ ಆಚರಿಸಿತು. ಮೆರವಣಿಗೆಗಳು, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.
ಅಲ್ಲದೆ ರಾಷ್ಟ್ರದ ವೈವಿಧ್ಯಮಯ ಗುಂಪುಗಳ ನಡುವಿನ ಬಾಂಧವ್ಯವನ್ನು ಒಗ್ಗೂಡಿಸುವ ಸಭೆಗಳನ್ನು ಆಯೋಜಿಸಲಾಯಿತು. ಬುಧವಾರ ಮಧ್ಯರಾತ್ರಿಯ ನಂತರ, ಸಾವಿರಾರು ಮಲೇಷಿಯನ್ನರು ದೇಶಭಕ್ತಿ ಗೀತೆಗಳ ಗಾಯನ, ದೇಶಭಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸಿದರು. ಗುರುವಾರ ಬೆಳಿಗ್ಗೆ ರಾಜ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಷಾ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಮಲೇಷಿಯಾದ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ, ಕ್ಯಾಬಿನೆಟ್ ಸದಸ್ಯರು ಮತ್ತು ಇತರ ಅಧಿಕಾರಿಗಳು, ಸಾವಿರಾರು ಮಿಲಿಟರಿ ಸಿಬ್ಬಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ರಾಷ್ಟ್ರದ ಜನರಿಗೆ ಸಂದೇಶ ನೀಡಿರುವ ರಾಜ ಅಬ್ದುಲ್ಲಾ ಅಗ್ನೇಯ ಏಷ್ಯಾ ರಾಷ್ಟ್ರದ ಜನರಾದ ಮಲೇಶಿಯನ್ನರು ಏಕತೆ ಕಾಯ್ದುಕೊಳ್ಳುವುದು ರಾಷ್ಟ್ರದ ಪ್ರಗತಿಗೆ ಅತಿ ಅಗತ್ಯ. ಭವಿಷ್ಯದ ಸವಾಲುಗಳನ್ನು ಎದುರಿಸಲು ಇದು ಅನಿವಾರ್ಯ ಎಂದು ತಿಳಿಸಿದರು. ಆಗಸ್ಟ್ 31, 1957 ರಂದು, ಅಂದಿನ ಫೆಡರೇಶನ್ ಆಫ್ ಮಲಯಾ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತು.