News Karnataka Kannada
Sunday, April 21 2024
Cricket
ವಿದೇಶ

ಕೊಲಂಬಸ್: ಅಮೆರಿಕದಲ್ಲಿ ನದಿಗುರುಳಿದ ರೈಲು

Train plunges into a river in America
Photo Credit : IANS

ಕೊಲಂಬಸ್: ಯುಎಸ್‌ನ ಮೊಂಟಾನಾದಲ್ಲಿ ಯೆಲ್ಲೊಸ್ಟೋನ್ ನದಿಗೆ ಅಡ್ಡಲಾಗಿದ್ದ ರೈಲು ಸೇತುವೆಯ ಕುಸಿದು ಬಿದ್ದಿದ್ದು, ಇದೇ ವೇಳೆ ಸರಕು ಸಾಗಿಸುತ್ತಿದ್ದ ರೈಲಿನ ವ್ಯಾಗನ್‌ಗಳು ನೀರಿಗೆ ಉರುಳಿವೆ.

ವ್ಯಾಗನ್‌ನಲ್ಲಿದ್ದ ಸಾಗಾಟ ಡಾಂಬರು, ಸಲ್ಫರ್‌ ನೀರಿಗೆ ಸೇರಿದೆ. ಮೊಂಟಾನಾ ರೈಲ್ ಲಿಂಕ್‌ನಿಂದ ನಿರ್ವಹಿಸಲ್ಪಡುವ ರೈಲು ವ್ಯಾಗನ್‌ಗಳು ಸ್ಥಳೀಯ ಕಾಲಮಾನ ಶನಿವಾರ ಬೆಳಿಗ್ಗೆ 6:45 ರ ಸುಮಾರಿಗೆ ಸ್ಟಿಲ್‌ವಾಟರ್ ಕೌಂಟಿಯಲ್ಲಿ ಪಶ್ಚಿಮಕ್ಕೆ ಹೋಗುತ್ತಿದ್ದಾಗ ಹಳಿತಪ್ಪಿ ನದಿಗುರುಳಿದೆ ಎಂದು ವಿಪತ್ತು ಮತ್ತು ತುರ್ತು ಸೇವೆಗಳ ಇಲಾಖೆ ಫೇಸ್‌ಬುಕ್‌ನಲ್ಲಿ ತಿಳಿಸಿದೆ.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಮೊಂಟಾನಾ ರೈಲ್ ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್ ಹೇಳಿದ್ದಾರೆ. ಎರಡು ವ್ಯಾಗನ್‌ಗಳಲ್ಲಿ ಸೋಡಿಯಂ ಹೈಡ್ರೊ ಸಲ್ಫೇಟ್ ಇತ್ತು. ಆದರೆ ಅದು ನೀರಿಗೆ ಸೇರಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು