News Karnataka Kannada
Sunday, April 28 2024
ವಿದೇಶ

ಬಿಜಿಂಗ್: ಶಾಂಘೈ ನಗರದಲ್ಲಿ ಹೊಸ ಒಮಿಕ್ರೋನ್ ಉಪ ತಳಿ ಪತ್ತೆ

More than 600 people tested positive for coronavirus in a single day
Photo Credit :

ಬಿಜಿಂಗ್: ದೇಶದಲ್ಲಿ ಕೋವಿಡ್ ಪ್ರಕರಣಗಳ ಜೊತೆಗೆ ಒಮಿಕ್ರೋನ್ ಹೊಸ ರೂಪಾಂತರಿಗಳು ಪತ್ತೆಯಾಗುತ್ತಿವೆ. ಈ ನಡುವೆ ಚೀನಾದ ಶಾಂಘೈ ನಗರದಲ್ಲಿ ಹೊಸ ಒಮಿಕ್ರೋನ್ ಉಪ ತಳಿ ಪತ್ತೆಯಾಗಿದೆ.

ಇದು ಓಮಿಕ್ರಾನ್ ರೂಪಾಂತರಿ ವೈರಸ್‌ಆಗಿದೆ. ನೂತನ ವೈರಸ್ ಬಿ ಎ.5.2.1 ಅಪಾಯ ಸೃಷ್ಟಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಿದೇಶದಿಂದ ಆಗಮಿಸಿದ ವ್ಯಕ್ತಿಗೆ ತೀವ್ರ ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಜುಲೈ 8 ರಂದು ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಓಮಿಕ್ರಾನ ರೂಪಾಂತರಿ ವೈರಸ್ ಬಿ ಎ.5.2.1 ಪತ್ತೆಯಾಗಿದೆ.

ಶಾಂಘೈನಲ್ಲಿ ಹೊಸ ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ ಕಠಿಣ ನಿರ್ಬಂಧಗಳು ಮತ್ತೆ ಜಾರಿಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಕೋವಿಡ್ ಪ್ರಕರಣ ಏರಿಕೆಯಾದ ಬೆನ್ನಲ್ಲೇ ಹಲವು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಇದೀಗ ಹೊಸ ವೈರಸ್ ಪತ್ತೆಯಿಂದ ಮತ್ತೆ ನಿರ್ಬಂಧ ಜಾರಿಯಾಗುತ್ತಿದೆ.

ಉಗಾಂಡದಿಂದ ಚೀನಾಗೆ ಆಗಮಿಸಿದ 37 ವರ್ಷದ ಮಹಿಳೆಯಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಶಾಂಘೈನಗರದಲ್ಲಿ ಇದೀಗ ಪ್ರತಿಯೊಬ್ಬರು ಎರಡೆರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.  ಸದ್ಯ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು