Categories: ವಿದೇಶ

ಮೊರಾಕ್ಕೋದಲ್ಲಿ ಪ್ರಬಲ ಭೂಕಂಪನ ಕನಿಷ್ಠ 296 ಮಂದಿ ಸಾವು

ವಾಷಿಂಗ್ಟನ್: ಮೊರಾಕೊದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪನದಲ್ಲಿ ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜಧಾನಿ ರಬಾತ್‌ನಿಂದ ದಕ್ಷಿಣಕ್ಕೆ 320 ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿ ನಗರ ಮರ್ರಾಕೆಚ್ ಪ್ರದೇಶದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣಕ್ಕೆ ಔರ್ಜಾಜೆಟ್ ಪ್ರಾಂತ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಶುಕ್ರವಾರ ರಾತ್ರಿ 11. 11ಕ್ಕೆ ಮರ್ರಾಕೇಶ್‌ನ ನೈಋತ್ಯಕ್ಕೆ 44 ಮೈಲಿ ಭೂಮಿಯ ಆಳದಲ್ಲಿ ಭೂಕಂಪ ಸಂಭವಿಸಿದೆ. USGS ನ PAGER ವ್ಯವಸ್ಥೆಯು ಈ ಪ್ರದೇಶದಲ್ಲಿ ಗಮನಾರ್ಹ ಹಾನಿಯ ಸಾಧ್ಯತೆಯನ್ನು ಅಂದಾಜು ಮಾಡಿದೆ. ಮೊರಾಕ್ಕೋದ ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪನ ಸಂಭವಿಸುತ್ತದೆ. 2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೊಸೈಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. 926 ಮಂದಿ ಗಾಯಗೊಂಡಿದ್ದರು.

Sneha Gowda

Recent Posts

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

9 mins ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

15 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

30 mins ago

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 99 ಬ್ಯಾಚ್ ನ 25ನೇ ವರ್ಷಾಚರಣೆ

ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…

41 mins ago

ಹಿಂದೂಗಳ ಪವಿತ್ರ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭ

ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…

56 mins ago

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

1 hour ago