News Karnataka Kannada
Sunday, April 14 2024
Cricket
ವಿದೇಶ

10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 14 ವರ್ಷದ ಹುಡುಗ

Untitled 12
Photo Credit :

ಅಮೆರಿಕಾ: ಅತ್ಯಾಚಾರವೆಸಗಲು ಯತ್ನಿಸಿ ಬಾಲಕಿಯ ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷದ ಬಾಲಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಅಮೆರಿಕಾದ ಚಿಪ್ಪೆವಾ ಕೌಂಟಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಇಲಿಯಾನಾ ಲಿಲಿ ಪೀಟರ್ಸ್ ಎಂಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 14 ವರ್ಷದ ಬಾಲಕ ಕೊಲೆ ಮಾಡಿದ್ದ.

ಸದ್ಯ ಆರೋಪಿಯನ್ನು ಬಂಧಿಸಿ ಚಿಪ್ಪೆವಾ ಕೌಂಟಿಯಲ್ಲಿ ನರಹತ್ಯೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ.

ಸಂತ್ರಸ್ತೆ ಮನೆಯಿಂದ ಹೊರಬಂದ ವೇಳೆ ಆರೋಪಿಯು ಅತ್ಯಾಚಾರವೆಸಗಿ ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ವಿಸ್ಕಾನ್ಸಿನ್ ಕೌಂಟಿಯ ಅಟಾರ್ನಿ ವೇಡ್ ನೆವೆಲ್ ಹೇಳಿದ್ದಾರೆ. 10 ವರ್ಷದ ಬಾಲಕಿಯ ಹೊಟ್ಟೆಗೆ ಹೊಡೆದ ಆರೋಪಿ, ಆಕೆಯನ್ನು ನೆಲಕ್ಕೆ ಬೀಳಿಸಿದ್ದಾನೆ. ನಂತರ ಆಕೆಯ ಕತ್ತು ಹಿಸುಕುವ ಮೊದಲು ಕೋಲಿನಿಂದ ಹೊಡೆದಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕವಾಗಿ ಆಕ್ರಮಣ ನಡೆಸಿದ್ದಾನೆ.

ಈ ಬಾಲಾಪರಾಧಿ ಇತರ ಬಾಲಾಪರಾಧಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರ ಗಳನ್ನು ಹೊಂದಿರಲಿಲ್ಲ ಹೀಗಾಗಿ ಬಾಂಡ್ ನೀಡುವಂತೆ ವಿನಂತಿಸಿದರು. ಪಾರ್ಕ್‌ವ್ಯೂ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿನಿ ಯಾಗಿದ್ದ ಲಿಲ್ಲಿಯಂತೆಯೇ ಈ ಹುಡುಗನೂ ಮನೆ ತೊರೆದಿದ್ದ.

ಆದರೆ ಅವರು ಪರಸ್ಪರ ಹೇಗೆ ತಿಳಿದಿದ್ದರು ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ಘಟನೆಯ ಬಳಿಕ ಬಾಲಕಿಯ ಮೃತದೇಹವು ಆಕೆಯ ಚಿಕ್ಕಮ್ಮನ ಮನೆಯ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಗಿತ್ತು. ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಲಿಲಿ ನಾಪತ್ತೆಯಾದ ಬಳಿಕ ಆಕೆಯ ಕುಟುಂಬ ಎಲ್ಲೆಡೆ ಹುಡುಕಾಟ ನಡೆಸಿ ಸಿಗದಿದ್ದಾಗ ಬಾಲಕಿಯ ತಂದೆ ನಾಪತ್ತೆ ದೂರು ದಾಖಲಿಸಿದ್ದರು.

ಆಕೆಯ ಬೈಸಿಕಲ್ ಹಾದಿಯಲ್ಲಿ ಸಿಕ್ಕಿತ್ತು. ಚಿಪ್ಪೆವಾ ಫಾಲ್ಸ್ ಪೊಲೀಸ್ ಮುಖ್ಯಸ್ಥ ಮ್ಯಾಥ್ಯೂ ಕೆಲ್ಮ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ ಶಂಕಿತನ ಬಂಧನವಾಗಿದ್ದು, ಇದರಿಂದ ಸಮುದಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ಅಚಾನಕ್‌ ಆಗಿ ಹತ್ಯೆಗೀಡಾದ ಲಿಲಿ ಪೀಟರ್ಸ್ ಅನ್ನು ಯಾರಿಂದಲೂ ಮರಳಿಸಲಾಗದು. ಆದರೆ ಆಕೆಯ ಕುಟುಂಬ ಮತ್ತು ಸಮುದಾಯಕ್ಕೆ ಈ ಸುದ್ದಿ ತಲುಪಿಸಲು ನಾವು ತುಂಬಾ ಕೃತಜ್ಞರಾಗಿದ್ದೇವೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು