Categories: ವಿದೇಶ

ಹೊಸ ಆಪ್‌ ಶುರು ಮಾಡಿದ ಡೊನಾಲ್ಡ್‌ ಟ್ರಂಪ್!‌

ಫೇಸ್‌ ಬುಕ್‌, ಟ್ವಿಟರ್‌ ನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಬಂದು ವರ್ಷವೇ ಕಳೆದು ಹೋಗಿದೆ. ಅದನ್ನೇ ಸವಾಲಾಗಿ ತೆಗೆದುಕೊಂಡ ಅವರು ತಮ್ಮದೇ ಆದ ಹೊಸ ಸೋಷಿಯಲ್‌ ಮಿಡಿಯಾ ಆಪ್‌ ಲಾಂಚ್‌ ಶುರು ಮಾಡಿದ್ದಾರೆ.

ಫೆ.21 2022ರಂದು ಡೊನಾಲ್ಡ್‌ ಟ್ರಂಪ್‌ ತಮ್ಮ ʼಟ್ರುತ್‌ ಸೋಷಿಯಲ್‌ʼ ಎಂಬ ಆಪ್‌ ಅನ್ನು ಅಧಿಕೃತವಾಗಿ ಲಾಂಚ್‌ ಮಾಡುವ ಸಾಧ್ಯತೆ ಇದೆ. ಟ್ರುತ್ ಸೋಷಿಯಲ್‌ ನಲ್ಲಿ ಡೊನಾಲ್ಡ್‌ ಟ್ರಂಪ್‌ ಮೊದಲ ಪೋಸ್ಟ್‌ ಮಾಡಿದ್ದು, ʼನಿಮ್ಮ ನೆಚ್ಚಿನ ಅಧ್ಯಕ್ಷ ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ. ತಯಾರಾಗಿರಿʼ ಎಂದಿದ್ದಾರೆ.

ಈ ಹೊಸ ಆಪ್‌ ನಲ್ಲಿ ಪಬ್ಲಿಷ್‌ ಮಾಡುವ ಪೋಸ್ಟ್‌ ಗಳನ್ನು ʼಟ್ರುತ್‌ʼ ಎಂದು ಕರೆಯಲಾಗುತ್ತದೆ. ಇದರಲ್ಲಿ ರಿಪ್ಲೈ, ಲೈಕ್‌, ಶೇರ್‌ ಆಯ್ಕೆ ಕೂಡ ಇರಲಿದೆ. ಈ ಅಪ್‌ ಲಾಂಚ್ ಆಗುವ ಮುನ್ನವೇ 175 ಮಂದಿ ಫಾಲೋವರ್ಸ್‌ ಅನ್ನು ಟ್ರಂಪ್‌ ಹೊಂದಿದ್ದಾರೆ.

ಈ ಹಿಂದೆ ಅಮೆರಿಕದ ಕ್ಯಾಪಿಟಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದರು. ಆ ಹೊತ್ತಿನಲ್ಲಿ ಟ್ವಿಟರ್‌ ಹಾಗೂ ಫೇಸ್‌ ಬುಕ್‌ ನ ನಿಯಮಗಳನ್ನು ಉಲ್ಲಂಘಿಸಿದಕ್ಕೆ ಎರಡೂ ಆಪ್‌ ಗಳು ಟ್ರಂಪ್‌ ಖಾತೆಯನ್ನು ಶಾಶ್ವತ ತೆಗೆದು ಹಾಕಿತ್ತು. ಅದಕ್ಕೆ ಟ್ವಿಟರ್‌ ಗೆ ಸೆಡ್ಡು ಹೊಡೆಯುವ ಮತ್ತೊಂದು ಟ್ರುತ್ ಸೋಷಿಯಲ್ ಅನ್ನೋ ಆಪ್‌ ಶುರು ಮಾಡಿದ್ದಾರೆ.‌

Sneha Gowda

Recent Posts

ಇಂದು ಎಚ್‌ ಡಿ ರೇವಣ್ಣ ಬೇಲ್​ ಅರ್ಜಿ ವಿಚಾರಣೆ

ಕಿಡ್ನಾಪ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ…

39 mins ago

ಚುನಾವಣೆಗೂ ಮುನ್ನ ಸ್ಫೋಟ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾವು!

ಚುನಾವಣೆಗೂ ಮುನ್ನ ದಿನವೇ ಜಾರ್ಖಂಡ್‌ನ ಪಲಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು…

1 hour ago

ಚುನಾವಣೆ ಹೊತ್ತಲ್ಲೆ ಶಂಕಿತ ಪಾಕ್ ಡ್ರೋನ್ ಹಾರಾಟ : ಸೇನೆಯಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿ ಬಳಿ ಶನಿವಾರ ತಡರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನಾ…

1 hour ago

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

2 hours ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

2 hours ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

2 hours ago