Categories: ವಿದೇಶ

ಸ್ವೀಡಿಷ್ ವಾಯುಪ್ರದೇಶದಲ್ಲಿ ಹಾರಾಡಿದ ರಷ್ಯನ್ ವಿಮಾನ

ಸ್ಟಾಕ್ಹೋಮ್ :  ರಷ್ಯಾದ ಮಿಲಿಟರಿ ವಿಮಾನವು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಸ್ವೀಡನ್ ಆರೋಪಿಸಿದೆ. ಬೋನ್ರ್ಹೋಮ್ ದ್ವೀಪದ ಬಳಿಯ ಬಾಲ್ಟಿಕ್ ಸಮುದ್ರದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಶನಿವಾರ ಹೊರಡಿಸಿದ ಹೇಳಿಕೆಯಲ್ಲಿ, ಸ್ವೀಡಿಷ್ ಸಶಸ್ತ್ರ ಪಡೆಗಳು ರಷ್ಯಾದ ಎಎನ್ -30 ಪ್ರೊಪೆಲ್ಲರ್ ವಿಮಾನವು ಸ್ವೀಡಿಷ್ ವಾಯುಪ್ರದೇಶದತ್ತ ಹಾರಿದೆ, ಪ್ರದೇಶವನ್ನು ತೊರೆಯುವ ಮೊದಲು ಸಂಕ್ಷಿಪ್ತವಾಗಿ ಸೀಮಾರೇಖೆಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.

ಸ್ವೀಡಿಷ್ ರಕ್ಷಣಾ ಸಚಿವ ಪೀಟರ್ ಹಲ್ಟಿಕ್ವಿಸ್ಟ್ ಅವರು ಸ್ವೀಡಿಷ್‍ನ ಸಾರ್ವಜನಿಕ ರೇಡಿಯೊಗೆ ನೀಡಿರುವ ಸಂದರ್ಶನದಲ್ಲಿ ರಷ್ಯಾ ಮಾಡಿರುವ ಸೀಮಾರೇಖೆ ಉಲ್ಲಂಘನೆ ಸ್ವೀಕಾರಾರ್ಹವಲ್ಲ ಮತ್ತು ವೃತ್ತಿಪರವಲ್ಲದ ಎಂದು ಆಕ್ಷೇಪಿಸಿದ್ದಾರೆ. ಮಾರ್ಚ್ ಆರಂಭದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನಾಲ್ಕು ರಷ್ಯಾದ ಯುದ್ಧವಿಮಾನಗಳು ಬಾಲ್ಟಿಕ್ ಸಮುದ್ರದ ಮೇಲೆ ಸ್ವೀಡಿಷ್ ವಾಯುಪ್ರದೇಶ ಉಲ್ಲಂಘಿಸಿದವು ಎಂದಿದ್ದಾರೆ.

ಉಕ್ರೇನ್ ಮೇಲೆ ಆಕ್ರಮಣ ಮುಂದುವರೆಸಿರುವ ರಷ್ಯಾ, ಸ್ವೀಡನ್ ಮತ್ತು ನೆರೆಯ ಫಿನ್ಲ್ಯಾಂಡ್ ಎರಡೂ ನ್ಯಾಟೋ ಸದಸ್ಯತ್ವವನ್ನು ಪರಿಗಣಿಸುತ್ತಿವೆ. ಇದು ಸ್ಥಿರತೆಯ ಬದಲು ಬೇರೆ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಮಾಸ್ಕೋ ಎಚ್ಚರಿಸಿದೆ.

Ashika S

Recent Posts

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

6 mins ago

ಮೊಬೈಲ್ ವಿಚಾರಕ್ಕೆ ಹಲ್ಲೆ: ಆರೋಪಿಗಳು ವಶಕ್ಕೆ

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.

11 mins ago

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

29 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

31 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

52 mins ago

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

1 hour ago