News Karnataka Kannada
Monday, April 29 2024
ವಿದೇಶ

ಸ್ಪ್ರಿಂಟ್‌ ರೇಸ್‌ನಲ್ಲಿ ದುರ್ಘಟನೆ; ಎರಡು ಕುದುರೆಗಳಿಗೆ ದಯಾಮರಣ

New Project 2021 12 13t133201.254
Photo Credit :

 

ಹಾಂಗ್‌ಕಾಂಗ್‌: ರೇಸ್‌ನಲ್ಲಿ ಕುದುರೆಯೊಂದು ಮುಗ್ಗರಿಸಿ ಬಿದ್ದ ಪರಿಣಾಮ ಮೂವರು ಜಾಕಿಗಳು ಗಾಯಗೊಂಡು, ಎರಡು ಅಶ್ವಗಳಿಗೆ ದಯಾಮರಣ ನೀಡಿದ ಘಟನೆ ಭಾನುವಾರ ಇಲ್ಲಿ ನಡೆದಿದೆ.ತೀವ್ರ ಗಾಯಗೊಂಡಿದ್ದ ಅಮೇಜಿಂಗ್‌ ಸ್ಟಾರ್‌, ನಬೂ ಅಟ್ಯಾಕ್‌ ಕುದುರೆಗಳಿಗೆ ದಯಾಮರಣ ನೀಡಲಾಯಿತು.

ಇಲ್ಲಿನ ಪ್ರಸಿದ್ಧ ಶಾ ಟಿನ್‌ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವ ಹಾಂಗ್‌ಕಾಂಗ್‌ ಗುಂಪು ಒಂದರ ರೇಸ್‌ನ ಐದನೇ ದಿನ ಜಾಕಿ ಲೈಲ್‌ ಹೆವಿಸ್ಟನ್‌ ಸವಾರಿ ಮಾಡುತ್ತಿದ್ದ ಕುದುರೆ ಮುಗ್ಗರಿಸಿ ಬಿತ್ತು.

ಇದರಿಂದಾಗಿ ನಾಗಾಲೋಟದಲ್ಲಿದ್ದ ಜಾಕ್‌ ಪ್ಯೂರ್ಟನ್‌ ಅವರ ಲಕ್ಕಿ ಪ್ಯಾಚ್‌ ಹಾಗೂ ಕ್ಯಾರಿಸ್‌ ಟೀಟನ್ ಅವರ ನಬೂ ಅಟ್ಯಾಕ್‌ ಮತ್ತು ಯೂಚಿ ಫುಕುನಗಾ ಅವರ ಪಿಕ್ಸಿ ನೈಟ್‌ ಹೆಸರಿನ ಅಶ್ವಗಳು ಎಡವಿ ಬಿದ್ದವು.

ಘಟನೆಯಲ್ಲಿ ಗಾಯಗೊಂಡ ಸವಾರರಾದ ಪ್ಯೂರ್ಟನ್‌, ಹೆವಿಸ್ಟನ್‌ ಮತ್ತು ಫುಕುನಗಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹಾಂಗ್‌ಕಾಂಗ್‌ ಜಾಕಿ ಕ್ಲಬ್ ಹೇಳಿದೆ. ಘಟನೆಯಲ್ಲಿ ಯಾವುದೇ ರೀತಿಯ ಗಾಯಗೊಳ್ಳದ ಟೀಟನ್ ರೇಸ್‌ಅನ್ನು ಪೂರ್ಣಗೊಳಿಸಿತು.

ಜಾಕಿ ಬ್ಲೇಕ್‌ ಶಿನ್‌ ಸವಾರಿ ಮಾಡುತ್ತಿದ್ದ ಕ್ಯಾಸ್ಪರ್‌ ಫೌನೆಸ್‌ ರೇಸ್‌ನಲ್ಲಿ ವಿಜಯ ಸಾಧಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು