Categories: ವಿದೇಶ

ವರ್ಷಾಂತ್ಯದಲ್ಲಿ ಉಕ್ರೇನ್ ಗೆ ಗೆಲುವು : ಗುಪ್ತಚರ ಇಲಾಖೆ

ಕೀವ್: ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಾಧಿಸಲಿದೆ ಎಂದು ಗುಪ್ತಚರ ಇಲಾಖೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.

ಉಕ್ರೇನ್ ನ ಮಿಲಿಟರಿ ಗುಪ್ತಚರ ಮುಖ್ಯಸ್ಥರಾದ 36 ವರ್ಷದ ಮೇಜರ್ ಜನರಲ್ ಕೈರಿಲೋ ಬುಡಾನೋವ್ ಅವರು ಈ ಕುರಿತು ಬ್ರಿಟನ್ ನ ಸ್ಕೈ ನ್ಯೂಸ್‌ಗೆ ಮಾಹಿತಿ ನೀಡಿದ್ದು, ‘ಉಕ್ರೇನ್‌ನಲ್ಲಿನ ರಷ್ಯಾ ವಿರುದ್ಧದ ಯುದ್ಧವು ಆಗಸ್ಟ್‌ನಲ್ಲಿ “ಬ್ರೇಕಿಂಗ್ ಪಾಯಿಂಟ್” ಅನ್ನು ತಲುಪಬಹುದಾಗಿದ್ದು, ವರ್ಷಾಂತ್ಯದ ವೇಳೆಗೆ ರಷ್ಯಾಗೆ ಸೋಲಿನ ರುಚಿ ತೋರಿಸಲಿದ್ದೇವೆ ಎಂದು ಹೇಳಿದ್ದಾರೆ.

ರಷ್ಯಾ ವಿರುದ್ಧದ ಯುದ್ಧದಲ್ಲಿ ನಾವು ಆರಂಭದಿಂದಲೂ ಆಶಾವಾದಿಗಳಾಗಿದ್ದು, ಆಗಸ್ಟ್ ತಿಂಗಳ 2ನೇ ವಾರದಲ್ಲಿ ಯುದ್ಧ ಬ್ರೇಕಿಂಗ್ ಪಾಯಿಂಟ್ ತಲುಪಬಹುದು. ಹೆಚ್ಚಿನ ಸಕ್ರಿಯ ಯುದ್ಧ ಕ್ರಮಗಳು ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಇದರ ಪರಿಣಾಮವಾಗಿ, ಡೊನ್ಬಾಸ್ ಮತ್ತು ಕ್ರೈಮಿಯಾ ಸೇರಿದಂತೆ ನಾವು ಕಳೆದುಕೊಂಡಿರುವ ನಮ್ಮ ಎಲ್ಲಾ ಪ್ರದೇಶಗಳಲ್ಲಿ ನಾವು ರಷ್ಯನ್ ಪಡೆಗಳನ್ನು ಹಿಮ್ಮೆಟ್ಟಿಸಿ, ಉಕ್ರೇನಿಯನ್ ಶಕ್ತಿಯನ್ನು ನವೀಕರಿಸುತ್ತೇವೆ” ಎಂದು ಹೇಳಿದರು.

ಪೂರ್ವ ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದಲ್ಲಿ ಪ್ರಸ್ತುತ ತೀವ್ರ ಹೋರಾಟ ನಡೆಯುತ್ತಿದೆ, ಅಲ್ಲಿ ರಷ್ಯಾ ಇತ್ತೀಚೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸದೆ ತನ್ನ ಪಡೆಗಳನ್ನು ಕೇಂದ್ರೀಕರಿಸುತ್ತಿದೆ. ಉಕ್ರೇನ್ “ನಮ್ಮ ಶತ್ರುಗಳ ಬಗ್ಗೆ ಎಲ್ಲವನ್ನೂ ತಿಳಿದಿದೆ. ಅವರ ಯೋಜನೆಗಳು ನಮಗೆ ತಿಳಿದಿದೆ. ರಷ್ಯಾವು ಇಲ್ಲಿಯವರೆಗೆ ಕೇವಲ ಒಂದು ಅಂದರೆ ಪ್ರಮುಖ ನಗರವಾದ ಖೆರ್ಸನ್‌ನ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಸಮರ್ಥವಾಗಿದೆ. ಆದರೆ ಮುಂದಿನ ದಿನಗಳಲ್ಲಿ ವ್ಯಾಪಕ ಹಿನ್ನಡೆಯನ್ನುಭವಿಸಲಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧದಿಂದಾಗಿ ರಷ್ಯಾದಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪದಚ್ಯುತಗೊಳಿಸಲು ಮಾಸ್ಕೋದಲ್ಲಿ ಈಗಾಗಲೇ ದಂಗೆ ನಡೆಯುತ್ತಿದೆ ಮತ್ತು ರಷ್ಯಾದ ನಾಯಕ ಪುಟಿನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್ ಗುಪ್ತಚರ ಮುಖ್ಯಸ್ಥರು ಪರಿಶೀಲಿಸದ ಮಾಹಿತಿ ನೀಡಿದರು. ಆದರೆ ಈ ವರದಿಯನ್ನು ಈ ಹಿಂದೆ ರಷ್ಯಾ ಸರ್ಕಾರ ತಳ್ಳಿ ಹಾಕಿತ್ತು.

Ashika S

Recent Posts

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

3 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

18 mins ago

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

26 mins ago

ಭಯೋತ್ಪಾದಕ ಕೃತ್ಯದಲ್ಲಿ ಭಾಗಿ: ಉಗ್ರರ ಇಬ್ಬರು ಸಹಚರರ ಬಂಧನ

ಉಗ್ರರ ಇಬ್ಬರು ಸಹಚರರನ್ನು ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

40 mins ago

ಗುಜರಾತ್ ತಂಡದ ನಾಯಕ ಶುಭಮನ್ ಗಿಲ್​ಗೆ ಮತ್ತೆ 24 ಲಕ್ಷ ರೂ. ದಂಡ

ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 35 ರನ್‌ಗಳಿಂದ ಜಯಗಳಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್…

40 mins ago

ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಪಂದ್ಯ…

1 hour ago