Categories: ವಿದೇಶ

ಯುದ್ಧದಿಂದ ಆದ ನಷ್ಟಕ್ಕೆ ರಷ್ಯಾ ಪರಿಹಾರ ನೀಡಬೇಕು: ಉಕ್ರೇನ್

ಕೀವ್: ಉಕ್ರೇನ್ ವಿರುದ್ಧ ರಷ್ಯಾ ಆರಂಭಿಸಿರುವ ಏಕಪಕ್ಷೀಯ ಸಮರ ಇದೀಗ 3ನೇ ತಿಂಗಳಿನ ಹೊಸ್ತಿಲಲ್ಲಿದ್ದು ಯುದ್ಧದಿಂದ ಉಕ್ರೇನ್ಗೆ ಸುಮಾರು 100 ಬಿಲಿಯನ್ ಡಾಲರ್ನಷ್ಟು ನಷ್ಟ ಸಂಭವಿಸಿದೆ. ಇದಕ್ಕೆರಷ್ಯಾ ಪರಿಹಾರ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಆಗ್ರಹಿಸಿದ್ದಾರೆ.

ಹೀಗೆ ಮಾಡುವುದು ನ್ಯಾಯೋಚಿತವಾಗಿದೆ. ನಮ್ಮ ದೇಶದ ಮೇಲೆ ಸುರಿದ ಪ್ರತೀ ಬಾಂಬ್ ನ, ನಮ್ಮತ್ತ ಉಡಾಯಿಸಿದ ಪ್ರತಿಯೊಂದು ಕ್ಷಿಪಣಿಯ ಭಾರವನ್ನೂ ಅವರು (ರಷ್ಯಾ) ಅನುಭವಿಸಬೇಕು ಎಂದವರು ಹೇಳಿದ್ದಾರೆ. ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ನಾವು ಪಾಲುದಾರ ದೇಶವನ್ನು ಆಹ್ವಾನಿಸುತ್ತೇವೆ ಮತ್ತು ರಷ್ಯದ ಕ್ರಮದಿಂದ ತೊಂದರೆ ಅನುಭವಿಸಿದ ಎಲ್ಲರೂ ತಮಗಾದ ಎಲ್ಲಾ ನಷ್ಟಗಳಿಗೂ ಪರಿಹಾರ ಪಡೆಯುವುದನ್ನು ಖಚಿತಪಡಿಸುವ ಕಾರ್ಯವಿಧಾನವನ್ನು ರಚಿಸಲಿದ್ದೇವೆ ಎಂದು ಅವರು ದೇಶವನ್ನುದ್ದೇಶಿಸಿ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:

ಅಝೊವ್‌ಸ್ತಲ್ ಉಕ್ಕು ಸ್ಥಾವರವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದಿರುವುದಾಗಿ ರಷ್ಯಾ ಪ್ರತಿಪಾದನೆ. ಇದರೊಂದಿಗೆ ಉಕ್ರೇನ್ನ ಅತ್ಯಂತ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನಲ್ಲಿ ಉಕ್ರೇನ್ ಯೋಧರ ಅಂತಿಮ ಪ್ರತಿರೋಧವನ್ನು ಹತ್ತಿಕ್ಕಿದ್ದು ಸ್ಥಾವರದಲ್ಲಿದ್ದ 2,439 ಉಕ್ರೇನ್ ಯೋಧರು ಶರಣಾಗಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್‌ಗೆ ಈ ವರ್ಷ ಸುಮಾರು 20 ಬಿಲಿಯನ್ ಡಾಲರ್ನಷ್ಟು ನೆರವು ಒದಗಿಸುವುದಾಗಿ ಜಿ7 ದೇಶಗಳ ಘೋಷಣೆ. ಉಕ್ರೇನ್‌ನ ಪೂರ್ವದ ಲುಹಾಂನ್ಸ್ಕ್ ಪ್ರಾಂತದಲ್ಲಿ ರಶ್ಯ ಸೇನೆ ಭಾರೀ ಆಕ್ರಮಣ ಮುಂದುವರಿಸಿದೆ. ಸಿವಿಯೆರೊಡೊನೆಟ್ಸ್ಕ್ ನಗರದಲ್ಲಿ ಬಾಂಬ್ ದಾಳಿಯಿಂದ ತೀವ್ರ ಹಾನಿಯಾಗಿದೆ. ಜನವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದು ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ಲುಹಾನ್ಸ್ಕ್ ಗವರ್ನರ್ ಸೆರ್ಹಿಯ್ ಗೈದಾಯಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಬಾಂಬ್ ದಾಳಿಯಿಂದಾಗಿ ಅಲ್ಲಿಂದ ಅಗತ್ಯದ ಆಹಾರ ವಸ್ತುಗಳ ರಫ್ತಿಗೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ದರ ಗಗನಕ್ಕೇರಿದ್ದು ಬಡಜನರಿಗೆ ತೀವ್ರ ಸಮಸ್ಯೆಯಾಗಿದೆ . ರಷ್ಯಾವು ತನ್ನ ಅನಾಗರಿಕ ಯುದ್ಧವನ್ನು ಕೊನೆಗೊಳಿಸಿ ಉಕ್ರೇನ್‌ನ ರೈತರು ತಮ್ಮ ಕಾಯಕ ಮುಂದುವರಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಬ್ರಿಟನ್ ಆಗ್ರಹಿಸಿದೆ.

ಉಕ್ರೇನ್‌ಗೆ ಅಮೆರಿಕದ 40 ಬಿಲಿಯನ್ ಡಾಲರ್ ನೆರವಿನ ಮಸೂದೆಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಬೃಹತ್ ಪ್ರಮಾಣದ ಪಾಶ್ಚಿಮಾತ್ಯ ಶಸ್ತ್ರಾಸ್ತ್ರ ಸಂಗ್ರಹ ಧ್ವಂಸ: ರಷ್ಯಾ ಹೇಳಿಕೆ

ಉಕ್ರೇನ್‌ನ ಝಿಟೊಮಿರ್ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕ್ಯಾಲಿಬ್ರ್ ಕ್ರೂಸ್ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಲಾಗಿದೆ. ಇವು ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳಿಂದ ಲಭಿಸಿದ ಶಸ್ತ್ರಾಸ್ತ್ರಗಳಾಗಿತ್ತು ಎಂದು ರಷ್ಯಾದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.

ಅಮೆರಿಕ ಮತ್ತು ಯುರೋಪ್ ದೇಶಗಳು ಪೂರೈಸಿದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳನ್ನು ನಾಶಗೊಳಿಸಲಾಗಿದೆ. ಸಂಘರ್ಷ ತೀವ್ರಗೊಂಡಿರುವ ಪೂರ್ವದ ಡೊನ್ಬಾಸ್ ವಲಯದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್ ಯೋಜಿಸಿತ್ತು.

ಅಲ್ಲದೆ ಕಪ್ಪು ಸಮುದ್ರ ದಡದಲ್ಲಿರುವ ಒಡೆಸಾ ಬಂದರಿನ ಬಳಿ ಉಕ್ರೇನ್‌ನ ತೈಲ ದಾಸ್ತಾನು ಕೇಂದ್ರಗಳಿಗೂ ಕ್ಷಿಪಣಿ ಅಪ್ಪಳಿಸಿದೆ. ಉಕ್ರೇನ್‌ನ 2 ಎಸ್ಯು-25 ಯುದ್ಧವಿಮಾನ ಮತ್ತು 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.

Ashika S

Recent Posts

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

14 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

24 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

56 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

1 hour ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

1 hour ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

1 hour ago