Categories: ವಿದೇಶ

ಮೂರನೇ ಮಗುವನ್ನು ಪಡೆದರೆ 11 ಲಕ್ಷ ರೂ. ಬಹುಮಾನ!

ಚೀನಾ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನುಕಂಟ್ರೋಲ್‌ ಮಾಡಿದ್ದ ಜನಸಂಖ್ಯೆಯ ನಂ.1 ದೇಶವಾಗಿರುವ ಚೀನಾ ಇದೀಗ ತನ್ನ ತನ್ನ ವ್ಯಾಖ್ಯಾನ ಬದಲಿಸಿದೆ.

ಈ ಹಿಂದೆ ಚೀನಾ ಒಂದು ಮಗುವು ಸಾಕು ಎಂದುಕಟ್ಟುನಿಟ್ಟಿನ ನಿಯಮ ಜಾರಿ ತಂದಿದ್ದು, ಇದನ್ನು ತಪ್ಪಿದವರಿಗೆ ಕಠಿಣ ಶಿಕ್ಷೆಯನ್ನು ಹೇಳಿತ್ತು. ಇದರಿಂದ ಅನೇಕ ಜನರು ಒಂದೇ ಮಗುವನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಚೀನಾದ ಜನಸಂಖ್ಯೆ ಪ್ರಮಾಣ ಕುಸಿದಿತ್ತು.

2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಲಿದೆ ಎಂದು ಯೋಚಿಸಿರುವ ಚೀನಾ ಸರ್ಕಾರ ಇದೀಗ ಮೂರನೇ ಮಗುವನ್ನು ಪಡೆಯಲು ದಂಪತಿಗೆ ಉತ್ತೇಜನ ನೀಡುತ್ತಿದೆ.

ಹೀಗಾಗಿ ಚೀನಾದ ರಾಜಧಾನಿ ಬೀಜಿಂಗ್‌ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಸಂಸ್ಥೆ ತಮ್ಮ ಉದ್ಯೋಗಿಗಳಿಗೆ ಆಫರ್ ನೀಡಿದ್ದು, ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ , ಬರೋಬ್ಬರಿ 90 ಸಾವಿರ ಯುವಾನ್ ನಗದು ಹಣ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 11 ಲಕ್ಷ ರೂಪಾಯಿಗಳ ಪ್ರೋತಾಹ ಧನ ನೀಡಲಾಗುತ್ತದೆ ಎಂದು ಹೇಳಿದೆ.

ಮಾತ್ರವಲ್ಲದೇ ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ.

1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದಿದ್ದ ಚೀನಾ , ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಅದನ್ನು ಉತ್ತೇಚಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

7 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

7 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

7 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

8 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

8 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

8 hours ago