Categories: ವಿದೇಶ

ಪೋಸ್ಟ್‌ಮಾರ್ಟಮ್‌ಗೆ ದೇಹ ತುಂಡರಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಗೊರಕೆ ಶಬ್ದ ಕೇಳಿ ಬೆಚ್ಚಿಬಿದ್ದ ವೈದ್ಯರು

ಮ್ಯಾಡ್ರಿಡ್‌ (ಸ್ಪೇನ್‌) : ಸತ್ತುಹೋದ ಎಂದು ವೈದ್ಯರು ಹೇಳಿದರೂ ಎಷ್ಟೋ ವ್ಯಕ್ತಿಗಳು ಬದುಕಿರುವ ಕುರಿತಾಗಿ ಇತ್ತೀಚಿಗೆ ಅನೇಕ ಘಟನೆಗಳು ನಡೆಯುತ್ತಿವೆ. ಚಿತಾಗಾರಕ್ಕೆ ಒಯ್ಯುವ ವೇಳೆ ಉಸಿರಾಡುವುದು, ಇಲ್ಲವೇ ಕೈ ಕಾಲುಗಳನ್ನು ಅಲ್ಲಾಡಿಸುವುದು… ಹೀಗೆ ಜೀವಂತ ಬಂದಿರುವ ಘಟನೆಗಳು ನಡೆಯುತ್ತಲೇ ಇವೆ.

ಅಂಥದ್ದೇ ಒಂದು ಘಟನೆ ಇದೀಗ ಸ್ಪೇನ್‌ನಿಂದ ವರದಿಯಾಗಿದೆ. ಸ್ಪೇನ್‌ನ ವಿಲ್ಲಾಬೋನಾದಲ್ಲಿರುವ ಆಸ್ಟುರಿಯಸ್ ಸೆಂಟ್ರಲ್ ಪೆನಿಟೆನ್ಷಿಯರಿಯಲ್ಲಿ ಗೋಂಜಲೊ ಮಾಟೊಯಾ ಜಿಮೆನೆಜ್ ಎಂಬ ಕೈದಿ ಬಿದ್ದುಕೊಂಡಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾಗ, ಮೂವರು ತಜ್ಞ ವೈದ್ಯರು ಈತ ಸತ್ತುಹೋಗಿರುವುದಾಗಿ ಘೋಷಿಸಿದ್ದರು. ಜೈಲಿನ ಆವರಣದಲ್ಲಿ ಈ ಘಟನೆ ನಡೆದಿತ್ತು.

ಜೈಲಿನಲ್ಲಿರುವ ವ್ಯಕ್ತಿ ಸಾವನ್ನಪ್ಪಿರುವುದರಿಂದ ಕೆಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶದ ಮೇರೆಗೆ ವಿಧಿವಿಜ್ಞಾನ ವೈದ್ಯರನ್ನು ಕರೆಸಲಾಗಿತ್ತು. ಅವರು ಸಹ ಈತನ ಸಾವನ್ನು ದೃಢ ಪಡಿಸಿದ್ದರು. ಆತ ಸತ್ತಿರುವುದಾಗಿ ಮನೆಯವರಿಗೂ ವಿಷಯ ತಿಳಿಸಲಾಗಿತ್ತು.

ಸಾವಿನ ಬಗ್ಗೆ ತಿಳಿದುಕೊಳ್ಳಲು ಈತನನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಒಯ್ಯಲಾಗುತ್ತಿತ್ತು. ಪರೀಕ್ಷೆಗಾಗಿ ದೇಹ ತುಂಡರಿಸಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಆದರೆ ಅದಕ್ಕೂ ಸ್ವಲ್ಪ ಮುಂಚೆಯೇ ಗೋಂಜಲೊ ದೇಹದಿಂದ ಗೊರಕೆ ಶಬ್ದ ಕೇಳಿಬಂದಿದ್ದು, ವೈದ್ಯರು ಬೆಚ್ಚಿಬಿದ್ದಿದ್ದಾರೆ.

ಆರಂಭದಲ್ಲಿ ವೈದ್ಯರು ಹಾಗೂ ಪೋಸ್ಟ್‌ಮಾರ್ಟಮ್‌ ಸ್ಥಳದಲ್ಲಿ ಇದ್ದ ಸಿಬ್ಬಂದಿ ಇದನ್ನು ನಂಬಲಿಲ್ಲ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆತನ ದೇಹದಲ್ಲಿ ಚಲನೆ ಇರುವುದು ಕಂಡುಬಂತು. ಗೊರಕೆ ಹೊಡೆಯುತ್ತಿದ್ದುದು ಕೂಡ ಅದೇ ದೇಹದಿಂದ ಬರುತ್ತಿರುವುದು ತಿಳಿಯಿತು. ಕೂಡಲೇ ಗೋಂಜಲೊನನ್ನು ಓವಿಡೊದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದಾಗ ಆತ ಬದುಕಿರುವುದು ತಿಳಿದುಬಂದಿದೆ.

ಈತನಿಗೆ ಸೈನೋಸಿಸ್‌ ಸಮಸ್ಯೆಯಿತ್ತು. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಮೃತಪಟ್ಟಿರುವಂತೆ ಕಂಡಿತ್ತು ಎಂದು ಈಗ ವೈದ್ಯರು ವರದಿಯನ್ನು ನೀಡಿದ್ದಾರೆ.

Gayathri SG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

2 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

2 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

3 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

3 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

3 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

3 hours ago