Categories: ವಿದೇಶ

ಡೆಲ್ಟಾಗಿಂತಲೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಓಮಿಕ್ರಾನ್: ಸಂಶೋಧನೆ

ರೋಮ್: ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿರುವ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ರೂಪಾಂತರ ತಳಿ ಓಮಿಕ್ರಾನ್, ಡೆಲ್ಟಾಗಿಂತಲೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಇಟಲಿಯ ರೋಮ್‌ನ ಪ್ರತಿಷ್ಠಿತ ಬಂಬಿನೊ ಗೆಸು ಆಸ್ಪತ್ರೆ ಬಿಡುಗಡೆ ಮಾಡಿರುವ ವೈರಸ್‌ನ ಮೊದಲ ಚಿತ್ರದಲ್ಲಿ ತಿಳಿದುಬಂದಿದೆ.

ನಕ್ಷೆಯಂತೆ ಕಾಣುವ ಮೂರು ಆಯಾಮದ ‘ಚಿತ್ರ’ ದಲ್ಲಿ, ಒಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ರೂಪಾಂತರಗಳನ್ನು ಹೊಂದಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಜೀವಕೋಶಗಳೊಂದಿಗೆ ಸಂವಹನ ನಡೆಸುವ ಪ್ರೋಟೀನ್‌ ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ’ಎಂದುಸಂಶೋಧಕರ ತಂಡ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಮುಖ್ಯವಾಗಿ ಬೋಟ್‌ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಗ್‌ಕಾಂಗ್‌ನಲ್ಲಿ ಕಂಡು ಬಂದ ವೈರಸ್‌ ಕುರಿತಂತೆ ವೈಜ್ಞಾನಿಕ ಸಮುದಾಯಕ್ಕೆ ಲಭ್ಯವಾದ ಈ ಹೊಸ ರೂಪಾಂತರದ ಸೀಕ್ವೆನ್ಸ್‌ಗಳ ಅಧ್ಯಯನದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ.

‘ಎಲ್ಲಾ ರೂಪಾಂತರಗಳನ್ನು ನಕ್ಷೆಯನ್ನು ಪ್ರತಿನಿಧಿಸುವ ಈ ಚಿತ್ರವು ಓಮಿಕ್ರಾನ್‌ನ ರೂಪಾಂತರಗಳನ್ನು ವಿವರಿಸುತ್ತದೆ. ಆದರೆ, ಅದರ ಪಾತ್ರವನ್ನು ವ್ಯಾಖ್ಯಾನಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.

‘ಈ ರೂಪಾಂತರಗಳ ಸಂಯೋಜನೆಯು ಪ್ರಸರಣದ ಮೇಲೆ ಅಥವಾ ಲಸಿಕೆಗಳ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರಬಹುದೇ ಎಂದು ಪ್ರಯೋಗಗಳ ಮೂಲಕ ವ್ಯಾಖ್ಯಾನಿಸುವುದು ಈಗ ಮುಖ್ಯವಾಗಿದೆ’ಎಂದು ಅವರು ಹೇಳಿದ್ದಾರೆ.

‘ಇದರರ್ಥ ಈ ರೂಪಾಂತರವು ಹೆಚ್ಚು ಅಪಾಯಕಾರಿ ಎಂದರ್ಥವಲ್ಲ. ವೈರಸ್ ಮತ್ತೊಂದು ರೂಪಾಂತರವನ್ನು ಸೃಷ್ಟಿಸುವ ಮೂಲಕ ಮಾನವರ ದೇಹಕ್ಕೆ ಹೊಂದಿಕೊಳ್ಳುತ್ತದೆ’ಎಂದು ಅವರು ಹೇಳಿದ್ದಾರೆ.

ಸಂಶೋಧಕರ ತಂಡವು ‘ಪ್ರೋಟಿನ್‌ನ ಮೂರು ಆಯಾಮದ ವ್ಯವಸ್ಥೆ’ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಮಿಲನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಬಂಬಿನೊ ಗೆಸು ಆಸ್ಪತ್ರೆಯ ಕ್ಲಿನಿಕಲ್ ಮೈಕ್ರಿಬಯಾಲಜಿಯ ಪರೊಫೆಸರ್ ಕ್ಲಾಡಿಯಾ ಆಲ್ಟರಿ ಹೇಳಿದ್ದಾರೆ.

 

Swathi MG

Recent Posts

ಪಕ್ಷಿಗಳ ದಾಹ ತಣಿಸುವ ಪರಿಸರ ಪ್ರೇಮಿ ರಿಯಾಜ್‌ ಪಾಶಾ

ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತಾಲ್ಲೂಕಿನ ಗಡಿ ಭಾಗದ ಜನ ಜಾನುವಾರುಗಳ ಜತೆ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ತಾಲ್ಲೂಕಿನ…

3 mins ago

ಚಾಮುಂಡಿಬೆಟ್ಟದ ಪಾದದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸೈನಿಕ ಅಕಾಡೆಮಿ  ವತಿಯಿಂದ ಶನಿವಾರ ಪ್ರಾಣಿ ಪಕ್ಷಿಗಳು,…

8 mins ago

ಪ್ರಜ್ವಲ್ ವಿರುದ್ಧ ನಾವು ಕೊಟ್ಟ ಮೊದಲ ದೂರು ದಾಖಲಾಗಿಲ್ಲ: ವಕೀಲ ಆಕ್ರೋಶ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ…

27 mins ago

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ : ಶೋಭಾ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಕುಮಾರಿ…

42 mins ago

ಕೋವಿಶೀಲ್ಡ್ ಲಸಿಕೆಯ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬ ಕುರಿತು ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

46 mins ago

ಪ್ರಜ್ವಲ್ ರೇವಣ್ಣ ಅಂತಹ ಸ್ವಭಾವದ ಹುಡುಗ ಅಲ್ಲ ಎಂದ ಸಂಸದ ಜಿ.ಎಸ್ ಬಸವರಾಜ್

ಪ್ರಜ್ವಲ್ ರೇವಣ್ಣ ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ. ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ…

1 hour ago