News Karnataka Kannada
Monday, April 29 2024
ವಿದೇಶ

ಟೆಕ್ಸಾಸ್‌ನ ಹ್ಯಾಲೊವೀನ್ ಕೂಟದಲ್ಲಿ ಗುಂಡಿನ ದಾಳಿ ಒಬ್ಬ ಮೃತ್ಯು, 9 ಮಂದಿಗೆ ಗಾಯ

Shoot
Photo Credit :

ಟೆಕ್ಸಾಸ್: ಪೂರ್ವ ಟೆಕ್ಸಾಸ್‌ನಲ್ಲಿ ಹ್ಯಾಲೊವೀನ್ ಪಾರ್ಟಿ(ಔತಣಕೂಟ)ದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 9 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾೆ.

ಟೆಕ್ಸಾರ್‌ಕಾನ ಎಂಬಲ್ಲಿನ ಸಭಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಹ್ಯಾಲೊವೀನ್ ಪಾರ್ಟಿಯಲ್ಲಿ ಈ ದುರ್ಘಟನೆ ನಡೆದಿದೆ.

ಸುಮಾರು 200 ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಏಕಾಏಕಿ ಗುಂಡಿನ ದಾಳಿ ನಡೆದಿದ್ದು ಜನ ಗಾಭರಿಯಿಂದ ಚೆಲ್ಲಾಪಿಲ್ಲಿಯಾದರು. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ 10 ಮಂದಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ 20 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹ್ಯಾಲೊವೀನ್ ದಿನ ಅಥವಾ ‘ಎಲ್ಲಾ ಸಂತರ ದಿನ’ವೆಂದು ಅಕ್ಟೋಬರ್ 31ರ ರಾತ್ರಿ ಹಾಯಲೊವಿನ್ ಪಾರ್ಟಿ ಆಯೋಜಿಸಲಾಗುತ್ತದೆ.

ಗುಂಡು ಹಾರಿಸಿದ್ದ ಶಂಕಿತ ವ್ಯಕ್ತಿ ತಕ್ಷಣ ವಾಹನವೊಂದರಲ್ಲಿ ಅಲ್ಲಿಂದ ಪರಾರಿಯಾಗಿದ್ದು ಈತನ ಪತ್ತೆಗೆ ಕಾರ್ಯಾಚರಣೆ ನಡೆಯುತಿತದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು