Categories: ವಿದೇಶ

ಚೀನಾದಲ್ಲಿ 101 ಹೊಸ ಕೋವಿಡ್-19 ಪ್ರಕರಣ ವರದಿ

ಬೀಜಿಂಗ್: ಚೀನಾದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಕೋವಿಡ್-19 ದೃಢಪಟ್ಟ 101 ಪ್ರಕರಣಗಳು ಪತ್ತೆಯಾಗಿವೆ.ಈ ಪೈಕಿ 65 ಪ್ರಕರಣಗಳು ಆಂತರಿಕ ಮಂಗೋಲಿಯಾ ಪ್ರಾಂತ್ಯದಲ್ಲಿ ವರದಿಯಾಗಿವೆ. ಜಿಯಾಂಗ್ಸುವಿನಲ್ಲಿ 16, ಲಿಯಾನಿಂಗ್‌ನಲ್ಲಿ 9, ಗೌಂಗ್‌ಡಾಂಗ್‌ನಲ್ಲಿ 8 ಮತ್ತು ಯುನ್ನಾನ್‌ನಲ್ಲಿ 3 ಪ್ರಕರಣಗಳು ದೃಢಪಟ್ಟಿವೆ.

ಆದರೆ, ಯಾರೊಬ್ಬರೂ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿರುವುದಾಗಿ ಭಾನುವಾರ ವರದಿಯಾಗಿದೆ.

ಚೀನಾದಲ್ಲಿ ‘ಶೂನ್ಯ ಕೋವಿಡ್-19 ನೀತಿ’ ರೂಪಿಸಿರುವುದರ ಹೊರತಾಗಿಯೂ, ಅಲ್ಲಿನ ಹಲವು ಪ್ರಾಂತ್ಯಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಶನಿವಾರ 94 ಮಂದಿಗೆ ಸೋಂಕು ಖಚಿತವಾಗಿತ್ತು.

ಮಾಧ್ಯಮಗಳ ವರದಿ ಪ್ರಕಾರ, ಬೀಜಿಂಗ್, ಹೀಲಾಂಗ್‌ಜಿಯಾಂಗ್ ಮತ್ತು ಇತರ ಪ್ರದೇಶಗಳಲ್ಲಿ ಕೋವಿಡ್ ಪರಿಸ್ಥಿತಿ ಈಗಲೂ ನಿಯಂತ್ರಣದಲ್ಲಿಲ್ಲ ಎನ್ನಲಾಗಿದೆ. ಶೆನ್‌ಝೆನ್‌, ಗೌಂಗ್‌ಝೌ, ಯುನ್‌ಫು, ಹುಯಿಝೌ, ಹೆಯುವಾನ್, ಮೀಝೌ, ಬೈಸ್‌, ನಾನ್‌ನಿಂಗ್, ಶಾಒಯಾಂಗ್ ನಗರಗಳಲ್ಲಿ ಹಾಗೂ ದಕ್ಷಿಣದ ಪ್ರಾಂತ್ಯಗಳಾದ ಗೌಂಗ್‌ಡಾಂಗ್‌, ಗೌಂಗ್‌ಕ್ಸಿ ಮತ್ತು ಹುನಾನ್‌ ಪ್ರಾಂತ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ.

ಚೀನಾದಲ್ಲಿ ನಡೆಯುವ ವಸಂತ ಕಾಲದ ಹಬ್ಬಗಳ ಸಂದರ್ಭದಲ್ಲಿ ಸೋಂಕು ಪ್ರಕರಣಗಳು ಏಕಾಏಕಿ ಹೆಚ್ಚಾಗುವ ಅಪಾಯವಿದೆ.

Swathi MG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

3 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

3 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

3 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

5 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

5 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

5 hours ago