News Karnataka Kannada
Wednesday, May 01 2024
ವಿದೇಶ

ಚೀನಾದಲ್ಲಿ ಮತ್ತೆ ಹೆಚ್ಚಿದ ಕೋವಿಡ್​

Corona Main Newsk 9219008122
Photo Credit :

ಬೀಜಿಂಗ್​: ಚೀನಾದಲ್ಲಿ 107 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಈಗ ಕೋವಿಡ್​ ಸಾಂಕ್ರಾಮಿಕತೆ ಮತ್ತೆ ಉಲ್ಬಣಗೊಳ್ಳುತ್ತಿದೆ. 14 ಪ್ರಾಂತ್ಯಗಳಲ್ಲಿ ಮಹಾಮಾರಿ ಹರಡಿ ಕಳವಳ ಉಂಟು ಮಾಡಿದೆ. ಬಂದರುಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.

ಅಕ್ಟೋಬರ್​ 17ರಿಂದ 29ರ ನಡುವೆ ಸುಮಾರು 377 ಪ್ರಕರಣಗಳು ಸ್ಥಳಿಯವಾಗಿ ಹರಡಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಅಧಿಕಾರಿಗಳು ತಿಳಿಸಿದ್ದಾರೆ.

2020ರ ಆರಂಭದಲ್ಲೇ ಸಾಂಕ್ರಾಮಿಕತೆಗೆ ಚೀನಾ ಕಡಿವಾಣ ಹಾಕಿದ್ದರೂ ಆಗಾಗ ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ. ಚೀನಾದ ಮಧ್ಯಭಾಗದಲ್ಲಿ ಶುಕ್ರವಾರ ಸ್ಥಳಿಯವಾಗಿ ಹರಡಿದ 59 ಕೇಸ್​ಗಳು ದೃಢಪಟ್ಟಿವೆ. ಇದು ಸೆಪ್ಟೆಂಬರ್​ 16ರ ನಂತರ ಗರಿಷ್ಠ ದೈನಿಕ ಪ್ರಕರಣವಾಗಿದೆ. ಬಹುತೇಕ ಹೊಸ ಪ್ರಕರಣಗಳು ದೇಶದ ಉತ್ತರ ಭಾಗದಿಂದ ವರದಿ ಆಗುತ್ತಿದೆ. ಹಿಲೊಂಗಿಜಿಯಾಂಗ್​, ಇನ್ನರ್​ ಮಂಗೋಲಿಯಾ, ಗಾನ್ಸು, ನಿಂಗ್​ಕ್ಸಿಯಾ ಮತ್ತು ರಾಜಧಾನಿ ಬೀಜಿಂಗ್​ನಿಂದ ಸೋಂಕಿನ ಕೇಸ್​ಗಳು ವರದಿಯಾಗಿವೆ.

ಕರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವ ಭಾರತ ಸರ್ಕಾರಕ್ಕೆ ಒಟ್ಟು 50,000 ಕೋಟಿ ರೂಪಾಯಿ ವೆಚ್ಚ ಆಗುವ ಸಾಧ್ಯತೆ ಇದೆ. ಮೊದಲು 35,000 ಕೋಟಿ ರೂಪಾಯಿ ಎಂದು ಬಜೆಟ್​ ಅಂದಾಜು ಮಾಡಲಾಗಿತ್ತು. ಪರಿಷತ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದರೂ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆಯಾದರೂ ಲಸಿಕೆ ಖರೀದಿಗೆ ಹಲವು ಜಾಗತಿಕ ಸಂಸ್ಥೆಗಳಿಂದ ಸಾಲ ಪಡೆಯಲು ಉದ್ದೇಶಿಸಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್​ ಮುಂತಾದ ಸಂಸ್ಥೆಗಳಿಂದ ರಿಯಾಯಿತಿ ಬಡ್ಡಿಯಲ್ಲಿ 200 ಕೋಟಿ ಡಾಲರ್​ ಸಾಲ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಚೀನಾ ಮತ್ತು ಇಂಡೋನೇಷ್ಯಾ ಕೂಡ ಸಾಲ ಪಡೆಯಲು ಮುಂದಾಗಿವೆ. ಇದರಿಂದಾಗಿ ಮಾರುಕಟ್ಟೆಯಿಂದ ಸಾಲ ತರುವ ಒತ್ತಡ ಕಡಿಮೆಯಾಗುತ್ತದೆ. ನಿಧಿ ಕ್ರೋಡಿಕರಿಸಲು ಖಾಸಗಿಯವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಶನಿವಾರ ಕರೊನಾ ಸೋಂಕಿನ 14,313 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,42,60,470ಕ್ಕೆ ಏರಿದೆ. 549 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,57,740 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,61,555 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸತತ 36ನೇ ದಿನವೂ ದೈನಿಕ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕಡಿಮೆಯಾಗಿದೆ. 125ನೇ ದಿನವೂ 50,000ಕ್ಕಿಂತ ಕಡಿಮೆಯಾಗಿದೆ. ಒಟ್ಟು 3,36,41,175 ರೋಗಿಗಳು ಗುಣಮುಖರಾಗಿದ್ದು ರಾಷ್ಟ್ರೀಯ ಚೇತರಿಕೆ ದರ ಶೇಕಡ 98.19 ಆಗಿದೆ.
ರಷ್ಯಾ ದಾಖಲೆ: ರಷ್ಯಾದಲ್ಲಿ ಸೆಪ್ಟೆಂಬರ್​ನಲ್ಲಿ ಕರೊನಾಕ್ಕೆ 44,265 ಜನರು ಬಲಿಯಾಗಿದ್ದು, ಸಾವಿನ ವಿಚಾರದಲ್ಲಿ ಎರಡನೇ ಮಹಾಯುದ್ಧದ ನಂತರದಲ್ಲಿ ದೇಶಕ್ಕೆ ಅತ್ಯಂತ ಸಂಕಟದ ತಿಂಗಳಾಗಿ ದಾಖಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು