News Karnataka Kannada
Wednesday, May 01 2024
ವಿದೇಶ

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ, ಆಸ್ಟ್ರಿಯಾದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿ

Corona World 10072021
Photo Credit :

ವಿಯೆನ್ನಾ: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಸ್ಟ್ರಿಯಾದಲ್ಲಿ ಸೋಮವಾರ ಬೆಳಗಿನ ಜಾವದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

ಗರಿಷ್ಠ 20 ದಿನಗಳವರೆಗೆ ನಿಯಮಾವಳಿಗಳು ಇರುತ್ತವೆ. ಆದರೆ 10 ದಿನಗಳ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.ಲಾಕ್‌ಡೌನ್‌ ಅವಧಿಯಲ್ಲಿ ಜನರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಡಿ. 13ರ ವೇಳೆಗೆ ಲಾಕ್‌ಡೌನ್‌ ತೆರವು ಮಾಡಲು ಸಾಧ್ಯವಾಗಬಹುದು ಎನ್ನಲಾಗಿದೆ. ಆದರೆ ಲಸಿಕೆ ಪಡೆಯದವರಿಗೆ ಲಾಕ್‌ಡೌನ್‌ ನಿಯಮಾವಳಿಗಳು ಅನ್ವಯಿಸಲಿವೆ.

ಶನಿವಾರ ಆಸ್ಟ್ರಿಯಾದಲ್ಲಿ 15,297 ಪ್ರಕರಣಗಳು ವರದಿಯಾಗಿವೆ. ಒಂದು ವಾರದಿಂದ ಇಲ್ಲಿ ನಿತ್ಯ ಸುಮಾರು 10,000 ಪ್ರಕರಣಗಳು ವರದಿಯಾಗುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು