News Karnataka Kannada
Monday, April 29 2024
ವಿದೇಶ

ಉತ್ತರ ಕೊರಿಯಾದಲ್ಲಿ11ದಿನ ಶೋಕಾಚರಣೆ: ಈ ಅವಧಿಯಲ್ಲಿ ನಗುವಂತೆಯೂ ಇಲ್ಲ!

New Project (2)
Photo Credit :

ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರಿಗೆ ಗೌರವ ಸಲ್ಲಿಸಲು,  ಸರ್ಕಾರ 11 ದಿನಗಳ ಶೋಕಾಚರಣೆಗೆ ಆದೇಶ ನೀಡಿದೆ.

ಇದೀಗ ಆಳ್ವಿಕೆ ನಡೆಸುತ್ತಿರುವ ಕಿಮ್ ಜಾಂಗ್ ಉನ್ ಸರ್ಕಾರ 11 ದಿನಗಳ ಕಾಲ ದೇಶದ ಪ್ರಜೆಗಳು ಮದ್ಯಪಾನ ಮಾಡುವಂತಿಲ್ಲ, ನಕ್ಕು ಕೇಕೆ ಹಾಕುವಂತಿಲ್ಲ ಜೊತೆಗೆ ಯಾವುದೇ ವಿನೋದದ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಆದೇಶ ನೀಡಿದೆ.

ಯಾವುದೇ ಸಂತೋಷದ ಲಕ್ಷಣಗಳನ್ನು ಇಲ್ಲಿಯ ಜನ ವ್ಯಕ್ತಪಡಿಸುವಂತೆ ಇಲ್ಲ. ಇದರಿಂದ ಜನರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಠಿಯಾಗಿದೆ. ಕಿಮ್ ಜಾಂಗ್ ಇಲ್ 1994 ರಿಂದ 2021ರವರೆಗೆ ಆಳ್ವಿಕೆ ನಡೆಸಿದ್ದರು. ಅದಾದ ನಂತರ ಅವರ ಪುತ್ರ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದರು. ತಮ್ಮ ತಂದೆಯ ಸ್ಮರಣಾರ್ಥ 11 ದಿನಗಳವರೆಗೆ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ದೇಶದ ಪ್ರಜೆಯೊಬ್ಬರು ಮಾತಾಡಿದ್ದು, 11 ದಿನ ನಾವು ಕುಡಿಯುವಂತಿಲ್ಲ, ಹೊರಗೆ ಹೋಗಿ ಮೋಜು ಮಾಡುವಂತಿಲ್ಲ. ಅಷ್ಟೇ ಯಾಕೆ ದಿನಸಿ ತರಲು ಕೂಡ ಹೋಗೋದಕ್ಕೆ ಆಗಿಲ್ಲ. ನಗುವಂತಿಲ್ಲ. ಈ ಹಿಂದೆ ಶೋಕಾಚರಣೆ ವೇಳೆ ಕುಡಿದು ಸಿಕ್ಕಿಬಿದ್ದವರನ್ನು ಅರೆಸ್ಟ್ ಮಾಡಲಾಗಿತ್ತು. ಅದಾದ ನಂತರ ಅವರೆಂದೂ ಕಾಣಸಿಗಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು