Categories: ವಿದೇಶ

ಉಕ್ರೇನ್ ನಿಂದ ಪ್ರತಿದಾಳಿ : ರಷ್ಯಾದ ಸಾವಿರ ಸೈನಿಕರು ಬಲಿ

 ಕೀವ್‌ : ಪೂರ್ವ ಉಕ್ರೇನಿನ ಸೆವೆರೊಡೊನೆಟ್‌ಸ್ಕ್‌ ನಗರ ಸಮೀಪದ ಸಿವರ್‌ಸ್ಕಿ ಡೊನೆಟ್ಸ್‌ ನದಿ ದಾಟಲು ರಷ್ಯಾ ಪಡೆಗಳು ಬಳಸುತ್ತಿದ್ದ ದೋಣಿಗಳ (ಪಾಂಟೂನ್) ಸೇತುವೆ ನಾಶಪಡಿಸಿದ ಉಕ್ರೇನ್‌ ಸೇನೆ, ರಷ್ಯಾದ ಸುಮಾರು ಒಂದು ಸಾವಿರ ಸೈನಿಕರು ಮತ್ತು ಅಪಾರ ಸಂಖ್ಯೆಯ ಸೇನಾ ವಾಹನಗಳನ್ನು ಹೊಡೆದುರುಳಿಸಿದೆ.

ಬಿಲೋಹೊರಿವ್ಕಾದಲ್ಲಿ ಎರಡು ದಿನಗಳು ನಡೆದ ಈ ದಾಳಿಯಲ್ಲಿ ರಷ್ಯಾ ಪಡೆಗಳ ಪಾಂಟೂನ್ ಸೇತುವೆ, ಸೇನಾ ವಾಹನಗಳು, 73 ಯುದ್ಧ ಟ್ಯಾಂಕ್‌ಗಳು, ಶಸ್ತ್ರಾಸ್ತ್ರ ಒಳಗೊಂಡ ಯುದ್ಧತಂತ್ರದ ಒಂದು ತುಕಡಿ (ಸುಮಾರು 1,000 ಸೈನಿಕರು)ಯನ್ನು ಧ್ವಂಸ ಮಾಡಿರುವ ಚಿತ್ರಗಳು ಮತ್ತು ವಿಡಿಯೊ ತುಣುಕುಗಳನ್ನು ಉಕ್ರೇನ್‌ ವಾಯುದಾಳಿ ಕಮಾಂಡ್‌ ಬಿಡುಗಡೆ ಮಾಡಿದೆ.

‘ಯುದ್ಧತಂತ್ರದ ಶಸ್ತ್ರಸಜ್ಜಿತ ಬೆಟಾಲಿಯನ್ ಬಲವನ್ನು ರಷ್ಯಾ ಕಳೆದುಕೊಂಡಿದೆ. ನದಿ ದಾಟುವ ಅಪಾಯಕಾರಿ ಹೆಜ್ಜೆ ರಷ್ಯಾದ ಕಮಾಂಡರ್‌ಗಳ ಮೇಲಿನ ಒತ್ತಡದ ಸಂಕೇತ. ಪೂರ್ವದಲ್ಲಿ ಉಕ್ರೇನ್‌ ಮುನ್ನಡೆ ಸಾಧಿಸುವ ಹಂತದಲ್ಲಿದೆ’ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.

ವಿಚಾರಣೆ ಆರಂಭ: ರಷ್ಯಾದ ಸಾರ್ಜೆಂಟ್ 21 ವರ್ಷದ ವಾಡಿಮ್ ಶಿಶಿಮರಿನ್ ಎಂಬುವವರನ್ನು ಯುದ್ಧಾಪರಾಧದ ಮೊದಲ ಪ್ರಕರಣದಲ್ಲಿ ಉಕ್ರೇನ್‌ ಪ್ರಾಸಿಕ್ಯೂಟರ್ ಜನರಲ್ ಇರಿನಾ ವೆನೆಡಿಕ್ಟೋವಾ ವಿಚಾರಣೆ ನಡೆಸಿದರು.

ಈಶಾನ್ಯ ಸುಮಿ ಪ್ರದೇಶದ ಹಳ್ಳಿಯೊಂದರಲ್ಲಿ ಫೆ.28ರಂದು ಉಕ್ರೇನ್‌ ನಾಗರಿಕನ ತಲೆಗೆ ಗುಂಡು ಹಾರಿಸಿದ ಆರೋಪ ಶಿಶಿಮರಿನ್‌ ಮೇಲಿದೆ. ಇದು ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗುವ ನಿರೀಕ್ಷೆ ಇದೆ.

ರಷ್ಯಾದ 41 ಸೈನಿಕರ ವಿರುದ್ಧ ಯುದ್ಧ ಅಪರಾಧ ಪ್ರಕರಣಗಳನ್ನು ಸಿದ್ಧಪಡಿಸುತ್ತಿರುವುದಾಗಿ ಉಕ್ರೇನ್‌ ಹೇಳಿದೆ.

Ashika S

Recent Posts

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ…

55 seconds ago

ಇಂದು ವಿಶ್ವ ನಗುವಿನ ದಿನ : ನಾವು ನಗೋಣ, ಇನ್ನೊಬ್ಬರನ್ನು ನಗಿಸೋಣ

ʻನಗುʼ ಇದು ಎಲ್ಲ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ.ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ…

13 mins ago

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

8 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

8 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

8 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

9 hours ago