News Karnataka Kannada
Monday, April 29 2024
ವಿದೇಶ

ಆಶಾ ಕಾರ್ಯಕರ್ತೆಯರಿಗೆ ವಿಶ್ವ ಅರೋಗ್ಯ ಸಂಸ್ಥೆಯಿಂದ ಗೌರವ

Untitled 1
Photo Credit :

ಜಿನೀವಾ: ಭಾರತದ ಹತ್ತು ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಭಾನುವಾರ ಗೌರವ ಸಲ್ಲಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯಕ ಸೌಲಭ್ಯಗಳಿಗೆ ನೇರ ಸಂಪರ್ಕ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ಹಾಗೂ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಅವಿರತ ಸೇವೆಗಾಗಿ ಈ ಗೌರವ ಸಂದಿದೆ.

ಜಾಗತಿಕಮಟ್ಟದಲ್ಲಿ ಆರೋಗ್ಯ ಸುಧಾರಣೆಯಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಭಾನುವಾರ ಆರು ಪ್ರಶಸ್ತಿಗಳನ್ನು ಘೋಷಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ‘ಈ ಪ್ರಶಸ್ತಿ ಪುರಸ್ಕೃತರು ಜೀವಮಾನದ ಸಮರ್ಪಣೆ, ಪಟ್ಟುಬಿಡದ ಸಮರ್ಥನೆ, ಸಮಾನತೆಗೆ ಬದ್ಧತೆ ಮತ್ತು ಮಾನವೀಯತೆಯ ನಿಸ್ವಾರ್ಥ ಸೇವೆಯನ್ನು ಸಾಕಾರಗೊಳಿಸಿದ್ದಾರೆ’ ಎಂದು ಹೇಳಿದರು.

2019ರಲ್ಲಿ ಈ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಭಾನುವಾರ 75ನೇ ವಿಶ್ವ ಆರೋಗ್ಯ ಸಂಸ್ಥೆಯು ಆಯೋಜಿಸಿದ್ದ ಉನ್ನತಮಟ್ಟದ ಅಧಿವೇಶನದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ವರ್ಚುವಲ್ ಮೂಲಕ ಗೌರವ ಸಲ್ಲಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು