ವಿದೇಶ

ಆನ್‌ಲೈನ್‌ ಶಾಪಿಂಗ್‌ನಲ್ಲಿ ಭಾಗವಹಿಸಿದ ಗ್ರಾಹಕರಿಗೂ ಕೋವಿಡ್‌  ಹರಡಬಹುದು :ಚೀನಾ ಎಚ್ಚರಿಕೆ

ಬೀಜಿಂಗ್‌(ನ.13) : ಪ್ರಸಕ್ತ ವರ್ಷದ ಚೀನಾದ ವಾರ್ಷಿಕ ‘ಸಿಂಗಲ್ಸ್‌ ಡೇ ಫೆಸ್ಟಿವಲ್‌’  ಆನ್‌ಲೈನ್‌ ಶಾಪಿಂಗ್‌ನಲ್ಲಿ ಭಾಗವಹಿಸಿದ ಕೆಲ ಗ್ರಾಹಕರಿಗೂ ಕೋವಿಡ್‌  ಹರಡಬಹುದು ಎಂದು ಚೀನಾ ಎಚ್ಚರಿಕೆ ನೀಡಿದೆ.

ಹಿಬೇ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಮಕ್ಕಳ ಉಡುಪುಗಳನ್ನು ಉತ್ಪಾದಿಸುವ ಕಂಪನಿಯ ಮೂವರು ನೌಕರರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಿಂಗಲ್ಸ್‌ ಡೇ ಫೆಸ್ಟಿವಲ್‌ ಮುಖಾಂತರ ಈ ಕಂಪನಿ ಉತ್ಪಾದಿಸಿದ ಮಕ್ಕಳ ಉಡುಪುಗಳನ್ನು ಖರೀದಿಸಿದ ಗ್ರಾಹಕರು ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದೆ. ಹೀಗಾಗಿ ಈ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಕೋವಿಡ್‌  ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಲಾಗಿದೆ.

ಹೊರ ದೇಶಗಳಿಂದ ತರಿಸಿಕೊಳ್ಳಲಾಗುತ್ತಿರುವ ಘನೀಕರಿಸಿದ ಎಲ್ಲಾ ವಸ್ತುಗಳನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗುತ್ತಿದೆ. ಹೊರ ದೇಶಗಳಿಂದ ಬರುವ ಯಾವುದೇ ವಸ್ತುಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಸ್ಯಾನಿಟೈಸ್‌ ಮಾಡಬೇಕು. ಕಡಿಮೆ ಸೋಂಕು ಇರುವ ಸ್ಥಳಗಳಿಂದ ಬಂದಿರುವ ಪಾರ್ಸೆಲ್‌ ವಸ್ತುಗಳನ್ನು ಗ್ರಾಹಕರು ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ಗಳನ್ನು ಧರಿಸಿಯೇ ಸ್ವೀಕರಿಸಬೇಕು ಎಂದು ಗ್ರಾಹಕರಿಗೆ ಅಧಿಕಾರಿಗಳು ಹೇಳಿದ್ದಾರೆ.

ಪ್ರಸಕ್ತ ವರ್ಷದ ಚೀನಾದ ವಾರ್ಷಿಕ ‘ಸಿಂಗಲ್ಸ್‌ ಡೇ ಫೆಸ್ಟಿವಲ್‌’ನಲ್ಲಿ ಬರೋಬ್ಬರಿ 10 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳು ಬಿಕರಿಯಾಗಿವೆ. ಈ ಮೂಲಕ ಕೊರೋನಾ ಸಾಂಕ್ರಾಮಿಕ ನಡುವೆಯೂ ಕಳೆದ ವರ್ಷಕ್ಕಿಂತ ದಾಖಲೆಯ ವ್ಯವಹಾರ ನಡೆದಿದೆ. ನ.1ರಿಂದ ನ.11ರ ವರೆಗೆ ನಡೆದ ಉತ್ಸವದಲ್ಲಿ ಆಲಿಬಾಬಾ ಕಂಪನಿಯು  6.27 ಲಕ್ಷ ಕೋಟಿ ಗಳಿಸಿದೆ.

ಜೆಡಿ.ಕಾಂ 4.05 ಲಕ್ಷ ಕೋಟಿ ವ್ಯವಹಾರ ಮಾಡಿದೆ. ಚೀನಾದ ಸಿಂಗಲ್ಸ್‌ ಡೇ ಅನ್ನು ಜಗತ್ತಿನ ಅತಿ ದೊಡ್ಡ ಆನ್‌ಲೈನ್‌ ಶಾಪಿಂಗ್‌  ಮಾರ್ಕೆಟಿಂಗ್‌ ಫೆಸ್ಟಿವಲ್‌ ಎಂದೇ ಕರೆಯಲಾಗುತ್ತದೆ. ಈ ಉತ್ಸವದಲ್ಲಿ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಪ್ರತಿ ವರ್ಷ ನ.11ರಂದು ನಡೆಯುವ ಸಿಂಗಲ್ಸ್‌ ಡೇ ಫೆಸ್ಟ್‌ ಅನ್ನು ಜನತೆ ಅಥವಾ ಅವಿವಾಹಿತ ಚೀನೀಯರು ಹೆಚ್ಚಾಗಿ ಆಚರಿಸುತ್ತಾರೆ.

 

Gayathri SG

Recent Posts

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

4 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

12 mins ago

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…

27 mins ago

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

30 mins ago

ಕಾಂಗ್ರೆಸ್‌ಗೆ 1 ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲಾಗಲಿಲ್ಲ: ಸಂಜೀವ ಮಠಂದೂರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ…

31 mins ago

‘ಜಂಟಿ ಸರ್ವೆ ಆಗುವ ತನಕ ಹಿರೀಕಾಟಿಯಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…

47 mins ago