News Karnataka Kannada
Wednesday, April 17 2024
Cricket
ವಿದೇಶ

ಶಾಂಘೈನಲ್ಲಿ ಲಾಕ್‌ಡೌನ್‌ ಸಡಿಲಿಕೆ: ಸೂಪರ್‌ಮಾರ್ಕೆಟ್‌ಗಳಿಗೆ ಜನರ ಮುತ್ತಿಗೆ

Mask..
Photo Credit :

ಬೀಜಿಂಗ್‌: ಕಳೆದ ಎರಡು ವಾರಗಳ ಲಾಕ್‌ಡೌನ್‌ನಿಂದ ಶಾಂಘೈ ಜನತೆ ಮಂಗಳವಾರ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.ಜನಾಕ್ರೋಶಕ್ಕೆ ಮಣಿದ ಚೀನ ಸರ್ಕಾರ ಮಂಗಳವಾರ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ಈ ಘೋಷಣೆ ಹೊರಬೀಳುತ್ತಿದ್ದಂತೆ ಜನರು ಆಹಾರವಸ್ತುಗಳನ್ನು ಕೊಳ್ಳಲು ಸೂಪರ್‌ಮಾರ್ಕೆಟ್‌ಗಳಿಗೆ ಧಾವಿಸಿದ್ದಾರೆ.

ಇನ್ನೂ ಕೆಲವರು “ನಮಗೆ ಸಹಾಯ ಮಾಡಿ’ ಎಂದು ಗೋಳಾಡಿದ್ದಾರೆ.ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 14 ದಿನಗಳಿಂದ 2.50 ಕೋಟಿ ಜನ ಮನೆಗಳಲ್ಲೇ ಬಂಧಿಯಾಗಿದ್ದರು.

ಈ ಪೈಕಿ ಎಷ್ಟು ಮಂದಿಗೆ ಹೊರಹೋಗಲು ಅವಕಾಶ ಕೊಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಕೆಲವು ಸೂಪರ್‌ಮಾರ್ಕೆಟ್‌ ಹಾಗೂ ಔಷಧ ಮಳಿಗೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಚೀನ ತೊರೆಯಲು ಸೂಚನೆ:
ಈ ನಡುವೆ, ಅಮೆರಿಕ ಸರ್ಕಾರವು ಶಾಂಘೈನಲ್ಲಿರುವ ತನ್ನ ರಾಯಭಾರ ಕಚೇರಿಯ ಸಿಬ್ಬಂದಿಗೆ (ತುರ್ತು ಕೆಲಸವಿಲ್ಲದವರಿಗೆ) ಕೂಡಲೇ ಅಲ್ಲಿಂದ ತೆರಳುವಂತೆ ಸೂಚಿಸಿದೆ.

ಬೂಸ್ಟರ್‌ 6 ತಿಂಗಳಿಗೆ ಇಳಿಸಿ
ಕೊರೊನಾ ಲಸಿಕೆಯ 2ನೇ ಡೋಸ್‌ ಪಡೆದ ಬಳಿಕ ಬೂಸ್ಟರ್‌ ಡೋಸ್‌ ಪಡೆಯಲು ಇರುವ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಸಿ ಎಂದು ಕೇಂದ್ರ ಸರ್ಕಾರ ಸೀರಂ ಇನ್‌ಸ್ಟಿಟ್ಯೂಟ್‌ ಸಿಇಒ ಅಡಾರ್‌ ಪೂನಾವಾಲ ಮನವಿ ಮಾಡಿದ್ದಾರೆ.

ಹೊಸ ಹೊಸ ರೂಪಾಂತರಿಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅವಧಿ ತಗ್ಗಿಸಬೇಕೆಂದು ಕೋರಿದ್ದಾರೆ. ಈ ನಡುವೆ, ಒಮಿಕ್ರಾನ್‌ನ ಎರಡು ಹೊಸ ಉಪ ತಳಿಗಳನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ತಳಿಗಳಿಗೆ ಬಿಎ.4 ಮತ್ತು ಬಿಎ.5 ಎಂದು ಹೆಸರಿಡಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು