News Karnataka Kannada
Saturday, April 13 2024
Cricket
ವಿದೇಶ

ಲೆಬನಾನ್ ನಲ್ಲಿ ಗುಂಡಿನ ದಾಳಿ ನಡೆಸಿದ ಇಸ್ರೇಲ್

Untitled 85
Photo Credit :

ಜೆರುಸಲೇಂ : ಇಸ್ರೇಲ್‍ನತ್ತ ಲೆಬನಾನ್ ರಾಕೆಟ್ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಇಸ್ರೇಲ್ ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆಸಿದೆ.

ಉತ್ತರ ಇಸ್ರೇಲ್‍ನ ತೆರೆದ ಪ್ರದೇಶದಲ್ಲಿ ರಾಕೆಟ್ ಬಿದ್ದಿದೆ. ಇದರಿಂದ ಯಾವುದೇ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಸೇನೆ ಸ್ಪಷ್ಟ ಪಡಿಸಿದೆ. ರಾಕೆಟ್ ಉಡಾವಣೆಯಾದ ಸ್ವಲ್ಪ ಸಮಯದ ಬಳಿಕ ಇಸ್ರೇಲ್ ದಕ್ಷಿಣ ಲೆಬನಾನ್‍ನಲ್ಲಿ ಮೂಲಸೌಕರ್ಯಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಿದೆ. ಉತ್ತರ ಇಸ್ರೇಲ್‍ನಲ್ಲಿ ವಾಡಿಕೆಯ ಚಟುವಟಿಕೆಗಳು ಮುಂದುವರೆದಿವೆ.

ರಾಕೆಟ್ ದಾಳಿಯ ಜವಾಬ್ದಾರಿಗಳನ್ನು ತಕ್ಷಣವೇ ಯಾರು ಒಪ್ಪಿಕೊಂಡಿಲ್ಲ.
ಇಸ್ರೇಲ್ ಮತ್ತು ಲೆಬನಾನ್‍ನ ಉಗ್ರಗಾಮಿ ಹಿಜ್ಬೊಲ್ಲಾ ಗುಂಪು ಕಡು ಶತ್ರುಗಳಾಗಿದ್ದು, 2006ರಿಂದಲೂ ಯುದ್ಧ ನಡೆಸುತ್ತಿವೆ. ಅಂದಿನಿಂದ ಗಡಿ ಪ್ರದೇಶವು ಉದ್ವಿಗ್ನವಾಗಿದೆ. ಆದರೆ ಬಹುತೇಕ ಶಾಂತವಾಗಿದೆ.

ಸಣ್ಣ ಪ್ಯಾಲೇಸ್ಟಿನಿಯನ್ ಗುಂಪುಗಳು ಲೆಬನಾನ್‍ನಲ್ಲಿ ಸಕ್ರಿಯವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿಯೂ ವರದಿಯಾಗಿದೆ. ಕಳೆದ ವರ್ಷ ಇಸ್ರೇಲ್ ಮತ್ತು ಗಾಜಾ ಉಗ್ರಗಾಮಿಗಳ ನಡುವಿನ 11 ದಿನಗಳ ಯುದ್ಧದ ನಂತರ ಈ ಪ್ರದೇಶವನ್ನು ಕೆಣಕಲು ಮತ್ತೆ ದುಸ್ಸಾಹಸ ನಡೆದಿದೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು