News Karnataka Kannada
Tuesday, April 16 2024
Cricket
ವಿದೇಶ

ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 3,000 ಸೈನಿಕರು ಮೃತಪಟ್ಟಿದ್ದಾರೆ: ಝೆಲೆನ್‌ಸ್ಕಿ

Ukrain President
Photo Credit :

ಕೀವ್: ಉಕ್ರೇನ್‌ನ 2,500 ರಿಂದ 3,000 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾ, ಗಡಿ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಕ್ಕೆ ಮತ್ತು ‘ಮಾಸ್ಕವಾ’ ನೌಕೆ ಮುಳುಗಿಸಿದಕ್ಕೆ ಪ್ರತೀಕಾರವಾಗಿ ಉಕ್ರೇನ್‌ನ ಕೀವ್‌ ಮೇಲೆ ಕ್ಷಿಪಣಿ ದಾಳಿ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ 10,000 ಜನರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಝೆಲೆನ್‌ಸ್ಕಿ ‘ಸಿಎನ್‌ಎನ್‌’ಗೆ ತಿಳಿಸಿದ್ದಾರೆ

ರಷ್ಯಾ ಪಡೆಗಳು ಸಮುದ್ರದಿಂದ ಉಡಾಯಿಸುವ ದೀರ್ಘ ಶ್ರೇಣಿಯ ಕಲಿಬ್‌ ಕ್ಷಿಪಣಿಗಳನ್ನು ಬಳಸಿ ಕೀವ್‌ ಹೊರ ವಲಯದ ವಿಶ್ನೆವೆ ಪಟ್ಟಣದಲ್ಲಿನ ಉಕ್ರೇನ್‌ ಸೇನಾ ಸಾಧನಗಳ ಕಾರ್ಖಾನೆಯನ್ನು ಗುರುವಾರ ತಡರಾತ್ರಿ ಧ್ವಂಸಗೊಳಿಸಿವೆ.

ಫೆಬ್ರುವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದರು, ಇದರ ಬೆನ್ನಲ್ಲೇ ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ವಾಯುನೆಲೆಗಳು, ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿಗಳನ್ನು ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಕೆನಡಾ, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿದ್ದು, ಹಲವು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು