News Karnataka Kannada
Thursday, April 25 2024
Cricket
ವಿದೇಶ

ಮತ್ತೆ ಕ್ರೂರತ್ವ ಮೆರೆದ ಪುಟಿನ್ ಪಡೆ

Untitled 219
Photo Credit :

ಉಕ್ರೇನ್‌ :  ಯುದ್ಧದ ಭೀಕರತೆ ಮುಂದುವರಿದಿದೆ. ಇತ್ತೀಚೆಗೆ ವಿಡಿಯೋ‌ ತುಣುಕು ವೈರಲ್ ಆಗಿದ್ದು,  ಬುಚಾ ಜಿಲ್ಲೆಯಲ್ಲಿ ರಷ್ಯಾದ ಸೈನಿಕರಿಂದ ಉಕ್ರೇನ್ ನಾಗರಿಕರು ಥಳಿತಕ್ಕೊಳಗಾಗಿ, ತೀವ್ರ ಪೀಡನೆಗೊಳಗಾಗಿದ್ದಾರೆ.

ಉಕ್ರೇನ್‌ನ ಪೊಲೀಸ್ ಮುಖ್ಯಸ್ಥ ಆಂಡ್ರಿ ನಿಬಿಟೊವ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ಪ್ರಕಾರ, ಯುದ್ಧ ಸಂತ್ರಸ್ತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ.

ಅವರ ಕೈ ಕಾಲುಗಳಲ್ಲಿ ಗುಂಡಿನ ಗಾಯಗಳು ಕಂಡುಬಂದಿವೆ. ಪ್ರತಿ ಪುರುಷರ ಕೈಕಟ್ಟಿ ಕಿವಿಗೆ ಗುಂಡು ಹಾರಿಸಲಾಗಿದೆ ಎಂದೂ ಹೇಳಿದ್ದಾರೆ.

ಕೈವ್‌ನ ಬುಚಾ ಮತ್ತು ಇತರ ಪಟ್ಟಣಗಳ ಬೀದಿಗಳಲ್ಲಿ ಡಜನ್‌ಗಟ್ಟಲೆ ದೇಹಗಳ ಭಯಾನಕ ಚಿತ್ರ ಈ ತಿಂಗಳ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿತ್ತು. ಉಕ್ರೇನ್ ಮಾಧ್ಯಮ ವರದಿಗಳ ಪ್ರಕಾರ ಬುಚಾದಲ್ಲಿ ನಡೆದ ಸಾಮೂಹಿಕ ಹತ್ಯೆಗಳಲ್ಲಿ ಭಾಗಿಯಾಗಿರುವ ರಷ್ಯಾದ ಸೈನಿಕರ ವಿರುದ್ಧ ಉಕ್ರೇನಿಯನ್ ಅಧಿಕಾರಿಗಳು ಕ್ರಿಮಿನಲ್ ಆರೋಪ ದಾಖಲಿಸಿದ್ದಾರೆ.

ಯುದ್ಧ ಪ್ರಾರಂಭವಾದಾಗಿನಿಂದ 1 ಮಿಲಿಯನ್ ಜನರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ ಎಂದು ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು