News Karnataka Kannada
Sunday, April 14 2024
Cricket
ವಿದೇಶ

ಬೆದರಿಕೆ ಹಿನ್ನೆಲೆ: ಇಮ್ರಾನ್‌ಗೆ ಭದ್ರತೆ ಒದಗಿಸಲು ಶಹಬಾಝ್‌ ಸೂಚನೆ

Imran Khan
Photo Credit :

ಇಸ್ಲಾಮಾಬಾದ್‌, ಪಾಕಿಸ್ತಾನ: ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಅವರಿಗೆ ಪೂರ್ಣ ಪ್ರಮಾಣದ ಭದ್ರತೆ ನೀಡುವಂತೆ ನೂತನ ಪ್ರಧಾನಿ ಶಾಹಬಾಝ್ ಷರೀಫ್‌ ಆಂತರಿಕ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ತೆಹ್ರೀಕ್‌-ಎ-ಇನ್ಸಾಫ್‌ ಪಕ್ಷ ಲಾಹೋರ್‌ನ ಮಿನಾರ್‌-ಇ-ಪಾಕಿಸ್ತಾನ್ ನಲ್ಲಿ ಕೈಗೊಳ್ಳಲಿರುವ ರ‍್ಯಾಲಿಯಲ್ಲಿ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರ‍್ಯಾಲಿಯ ವೇಳೆ ಇಮ್ರಾನ್‌ ಅವರಿಗೆ ಅಪಾಯವಾಗುವ ಸಂಭವ ಇದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿದ್ದವು.

ಜೀವ ಬೆದರಿಕೆಯ ಮಾಹಿತಿ ಸಿಗುತ್ತಲೇ ಇಮ್ರಾನ್‌ ಅವರು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡುವುದಾಗಿ ತಿಳಿಸಿದ್ದರು. ಆದರೆ ಇಮ್ರಾನ್‌ ಅವರ ಬೆಂಬಲಿಗರು, ಇದನ್ನು ಒಪ್ಪಿರಲಿಲ್ಲ. ಆದ್ದರಿಂದ ಇಮ್ರಾನ್‌ ಭೌತಿಕವಾಗಿ ‍ರ್‍ಯಾಲಿಯಲ್ಲಿ ಹಾಜರಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು