News Karnataka Kannada
Wednesday, April 24 2024
Cricket
ವಿದೇಶ

ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರಿಂದ ಭಾರೀ ಪ್ರತಿಭಟನೆ

Imran Khan
Photo Credit : Twitter

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರತಿಪಕ್ಷದ ನಾಯಕರಾಗಿದ್ದ ಶೆಹಬಾಜ್ ಷರೀಫ್ ಆಯ್ಕೆಯಾಗುವ ಸಾಧ್ಯತೆ ಇದೆ.ನೂತನ ಪ್ರಧಾನಿ ಆಯ್ಕೆಗೆ ಇಂದು ಮಧ್ಯಾಹ್ನ ಸಂಸತ್ ಸಮಾವೇಶಗೊಳ್ಳಲಿದೆ.

ಮೊನ್ನೆ ನಡೆದ ಅವಿಶ್ವಾಸ ಗೋತ್ತುವಳಿಯಲ್ಲಿ ಮಿತ್ರ ಪಕ್ಷಗಳು ಮತ್ತು ಪ್ರತಿಪಕ್ಷಗಳು ಜೊತೆಯಾಗಿ ಪ್ರಧಾನಿ ಇಮ್ರಾನ್ ಖಾನ್‍ರನ್ನು ಸೋಲಿಸುವ ಮೂಲಕ ಅಧಿಕಾರದಿಂದ ಹೊರಗಿಟ್ಟಿದ್ದಾರೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಅಧ್ಯಕ್ಷ 70 ವರ್ಷದ ಷರೀಫ್ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಉಪಾಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಭಾನುವಾರ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಈ ನಡುವೆ ಇಮ್ರಾನ್ ಖಾನ್ ಬೆಂಬಲಿಗರು ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಫೈಸಲಾಬಾದ್, ಮುಲ್ತಾನ್, ಗುಜ್ರಾನ್‍ವಾಲಾ, ವೆಹಾರಿ, ಝೇಲಂ ಮತ್ತು ಗುಜರಾತ್ ಜಿಲ್ಲೆಗಳು ಸೇರಿದಂತೆ ಪಂಜಾಬ್ ಪ್ರಾಂತ್ಯದ ಇತರ ಭಾಗಗಳಲ್ಲಿ, ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲೂ ಪಿಟಿಐ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ರಾತ್ರಿ 9 ಗಂಟೆಯ ನಂತರ ವಿವಿಧ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.

ಇಮ್ರಾನ್ ಖಾನ್‍ರನ್ನು ಅಧಿಕಾರದಿಂದ ವಜಾಗೊಳಿಸಿದ ನಂತರ, ಪಾಕಿಸ್ತಾನದ ಇತಿಹಾಸದಲ್ಲೇ ಸದನದ ವಿಶ್ವಾಸವನ್ನು ಕಳೆದುಕೊಂಡ ನಂತರ ಮನೆಗೆ ಕಳುಹಿಸಲಾದ ಮೊದಲ ಪ್ರಧಾನಿ ಖಾನ್ ಎಂಬ ದಾಖಲೆ ಉಳಿಯಿತು. ಒಕ್ಕೂಟ ಸಂಪುಟದ 52 ಸದಸ್ಯರನ್ನು ವಿಶ್ವಾಸ ಗೋತ್ತುವಳಿ ಬಳಿಕ ಡಿ-ನೋಟಿಫೈ ಮಾಡಲಾಗಿದೆ. ಸದನದ ಹೊಸ ನಾಯಕನನ್ನು ಆಯ್ಕೆ ಪ್ರಕ್ರಿಯೆ ಭಾನುವಾರ ಪ್ರಾರಂಭವಾಯಿತು. ಖಾನ್‍ರನ್ನು ಪದಚ್ಯುತಗೊಳಿಸಲು ಮತ ಹಾಕಿದ್ದ 174 ಸಂಸದರು ಬೆಂಬಲ ನೀಡಿದರೆ ಷರೀಫ್ ಪಾಕಿಸ್ತಾನದ ನುತನ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷರ ನಾಮನಿರ್ದೇಶನ ಪತ್ರಕ್ಕೆ ಪಿಟಿಐ ಹಲವು ಆಕ್ಷೇಪಗಳನ್ನು ಎತ್ತಿತ್ತು. ಪಿಟಿಐ ಹಿರಿಯ ನಾಯಕ ಬಾಬರ್ ಅವನ್ ಅವರು ಷರೀಫ್ ನ್ಯಾಯಾಲಯದ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು. ಅವನ್ನು ತಿರಸ್ಕರಿಸಿದ ಬಳಿಕ ಸಚಿವಾಲಯ ನಾಮಪತ್ರ ಅಂಗೀಕರಿಸಿದೆ. ಖುರೇಷಿ ಅವರ ನಾಮಪತ್ರವೂ ಅಂಗೀಕಾರಗೊಂಡಿದೆ.

2019 ರಲ್ಲಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಶೆಹಬಾಜ್ ಮತ್ತು ಅವರ ಮಗ ಹಮ್ಜಾ ಷರೀಫ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಸಿತು. ಮೂರು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಷರೀಫ್ ಒಕ್ಕೂಟ ವ್ಯವಸ್ಥೆಯ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು