News Karnataka Kannada
Thursday, April 25 2024
Cricket
ವಿದೇಶ

ನಾನು ಮಾನವೀಯತೆ ಪರ ಯಾವುದೇ ಸಮುದಾಯದ ವಿರೋಧಿ ನಾನಲ್ಲ:ಇಮ್ರಾನ್‌ ಖಾನ್‌

Imran Khan
Photo Credit :

ಇಸ್ಲಾಮಾಬಾದ್‌: “ನಾನು ಭಾರತದ ವಿರೋಧಿಯೇ ಅಲ್ಲ’ ನಾನು ಮಾನವೀಯತೆ ಪರ ಯಾವುದೇ ಸಮುದಾಯದ ವಿರೋಧಿ ನಾನಲ್ಲ’ ಇಂಥ ಒಂದು ಜ್ಞಾನೋದಯದ ಮಾತುಗಳನ್ನಾಡಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌.

ಶನಿವಾರ ತಡರಾತ್ರಿ ಕರಾಚಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೇಳೆ, ಈ ಅಂಶ ಪ್ರಸ್ತಾಪಿಸಿದ್ದಾರೆ.ಅಧಿಕಾರದಲ್ಲಿದ್ದ ವೇಳೆ ಭಾರತದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದ ಅವರು, ಈಗ ಮಿತ್ರತ್ವದ ಮಾತಾಡಿರುವುದು ಗಮನಾರ್ಹ.

“ನಾನು ಯಾವುದೇ ರಾಷ್ಟ್ರದ ವಿರೋಧಿಯಲ್ಲ. ಭಾರತ, ಐರೋಪ್ಯ ಒಕ್ಕೂಟ, ಅಮೆರಿಕದ ವಿರೋಧಿಯಲ್ಲ. ನಾನು ಮಾನವೀಯತೆ ಪರ. ಯಾವುದೇ ಸಮುದಾಯದ ವಿರೋಧಿ ನಾನಲ್ಲ’ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇಮ್ರಾನ್‌ ಖಾನ್‌ “ನಮ್ಮ ಸರ್ಕಾರವನ್ನು ಕೆಡವಲು ಅಮೆರಿಕ ಪ್ರತಿಪಕ್ಷಗಳಿಗೆ ನೆರವು ನೀಡುತ್ತಿದೆ’ ಎಂದು ದೂರಿದ್ದರು.

ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಹಾಕಿ ಎಂದು ಯುರೋಪ್‌ ಹೇಳಿದ್ದಕ್ಕೆ, “ಯುರೋಪ್‌ ನಮ್ಮನ್ನು ಅವರ ಸೇವಕರು ಎಂದುಕೊಂಡಿದೆ’ ಎಂದು ಆರೋಪಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು