News Karnataka Kannada
Sunday, April 21 2024
Cricket
ವಿದೇಶ

ಉಕ್ರೇನ್‌ ದಾಳಿ: ಬಂದರು ನಗರಿ ಮರಿಯುಪೋಲ್‌ ವಶಪಡಿಸಿಕೊಂಡ ರಷ್ಯಾ

Untitled 8
Photo Credit :

ಉಕ್ರೇನ್‌ : ಸತತ ಒಂದೂವರೆ ತಿಂಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾಕ್ಕೆ ಗುರುವಾರ ಮಹತ್ವದ ಜಯ ಸಿಕ್ಕಿದೆ. ಬಂದರು ನಗರಿ ಮರಿಯುಪೋಲ್‌ ತನ್ನ ಕೈವಶವಾಗಿದೆ ಎಂದು ರಷ್ಯಾ ಘೋಷಿಸಿದೆ. ಇದು ಕಳೆದ ಒಂದೂವರೆ ತಿಂಗಳ ಯುದ್ಧದಲ್ಲಿ ರಷ್ಯಾ ಕೈವಶವಾದ ಪ್ರಮುಖ ನಗರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಮರಿಯುಪೋಲ್‌ ವಿಮೋಚನೆ ಯಶಸ್ವಿಯಾಗಿದೆ’ ಎಂದು ಘೋಷಿಸಿದ್ದಾರೆ. ಆದರೆ ನಗರದ ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರ ಈಗಲೂ ಉಕ್ರೇನ್‌ ಸೈನಿಕರು ವಶದಲ್ಲಿದೆ. ಆದಾಗ್ಯೂ ಉಕ್ಕು ಸ್ಥಾವರದ ಮೇಲೆ ಮೇಲೆ ದಾಳಿ ನಡೆಸದಂತೆ, ಆದರೆ ಅಲ್ಲಿಂದ ಒಂದು ಧೂಳಿನ ಕಣ ಕೂಡ ಪರಾರಿಯಾಗದಂತೆ ನೋಡಿಕೊಳ್ಳಬೇಕೆಂದು ಸೇನೆಗೆ ಪುಟಿನ್‌ ತಾಕೀತು ಮಾಡಿದ್ದಾರೆ.

ಕ್ರಿಮಿಯಾ ಮತ್ತು ಮರಿಯುಪೋಲ್‌ ಉಕ್ರೇನ್‌ನ ಅತಿದೊಡ್ಡ ಕೈಗಾರಿಕಾ ಪ್ರದೇಶಗಳ ಪೈಕಿ ಒಂದು. ಅದು ಕೈತಪ್ಪಿದರೆ ಉಕ್ರೇನ್‌ಗೆ ಆರ್ಥಿಕವಾಗಿ ಹೊಡೆತ ಬೀಳಲಿದೆ. ಮರಿಯುಪೋಲ್‌ ಕೈತಪ್ಪಿದರೆ ದೇಶದ ದಕ್ಷಿಣ ಭಾಗದ ಪ್ರಮುಖ ಬಂದರಿನಿಂದ ಉಕ್ರೇನ್‌ ವಂಚಿತವಾಗಲಿದೆ. ಕ್ರಿಮಿಯಾ ಪ್ರದೇಶಕ್ಕೆ ಇದ್ದ ಬಹುದೊಡ್ಡ ಸಮಸ್ಯೆಯಾದ ಕುಡಿಯುವ ನೀರಿನ ಪೂರೈಕೆ ಸುಲಲಿತವಾಗಲಿದೆ.

ಇನ್ನು ಬಂದರು ನಗರಿ ಮರಿಯುಪೋಲ್‌ ಮೇಲೆ ರಷ್ಯಾ ಪಡೆಗಳು ಬಹುತೇಕ ಹಿಡಿತ ಸಾಧಿಸಿದ್ದು, ಉಕ್ಕಿನ ಸ್ಥಾವರದ ಮೇಲೆ ರಷ್ಯಾ ಪಡೆಗಳು ಭಾರೀ ಬಾಂಬ್‌ ದಾಳಿ ನಡೆಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು