Bengaluru 21°C
Ad

ಒಂದೇ ದಿನದಲ್ಲಿ 15 ಗಿನ್ನಿಸ್ ದಾಖಲೆ ಮಾಡಿದ ಡೇವಿಡ್ ರಶ್ !

World Reco

ಮೆರಿಕಾ: ಈಗಾಗಲೇ ದಾಖಲೆಗಳ ಸರಮಾಲೆಯನ್ನೇ ಮುರಿದು ಫೇಮಸ್ ಆಗಿರುವ ಅಮೆರಿಕದ ಡೇವಿಡ್ ರಶ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿದ್ದಾರೆ. ಒಂದಲ್ಲ.. ಎರಡಲ್ಲ.. ಒಂದೇ ದಿನ 15 ಗಿನ್ನಿಸ್ ದಾಖಲೆಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಅಮೆರಿಕದ ಇಡಾಹೋ ಮೂಲದ ಡೇವಿಡ್ ರಶ್ ಇದುವರೆಗೆ 250 ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಮತ್ತು ಇತ್ತೀಚೆಗೆ ಅವರು ಏಕಕಾಲದಲ್ಲಿ 15 ಗಿನ್ನಿಸ್ ವಿಶ್ವ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ. ಈ ಕ್ರಮದಲ್ಲಿ ಅವರು ಇತ್ತೀಚೆಗೆ ಲಂಡನ್‌ನಲ್ಲಿರುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಕಚೇರಿಗಳಿಗೆ ಭೇಟಿ ನೀಡಿದ್ದರು ಮತ್ತು ಅವರು ಪ್ರಸ್ತುತ ಹೊಂದಿರುವ 180 ಪದಕಗಳನ್ನು ಹರಾಜು ಹಾಕಲು ಹೋಗಿದ್ದರು.

ಲಂಡನ್‌ನಲ್ಲಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಡೇವಿಡ್ ರಶ್ ಅವರು 180 ಪ್ರಶಸ್ತಿಗಳನ್ನು ಹರಾಜು ಹಾಕುತ್ತಿರುವುದಾಗಿ ಘೋಷಿಸಿದರು. ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ನ್ಯಾಯಾಧೀಶ ವಿಲ್ ಸಿಂಡೆನ್ ಅವರು ಒಂದೇ ದಿನದಲ್ಲಿ 15 ದಾಖಲೆಗಳನ್ನು ಹೇಗೆ ಮುರಿದರು ಎಂಬುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.

https://t.co/J72DlCbibN

Ad
Ad
Nk Channel Final 21 09 2023