Ad

ಕೆಲಸದ ಒತ್ತಡ ತಾಳಲಾರದೆ ಮೆಟ್ಟಿಲು ಮೇಲಿಂದ ಬಿದ್ದು ರೋಬೋಟ್ ಸೂಸೈಡ್​

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

ದಕ್ಷಿಣ ಕೊರಿಯಾ: ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

Ad
300x250 2

ತನ್ನಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ ಎಂದು ಒತ್ತಡದಿಂದ ಬೇಸತ್ತು ರೋಬೋಟ್​ ಮೆಟ್ಟಿಲುಗಳಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅದು ಈ ರೀತಿಯ ವಿಚಿತ್ರ ಕೇಸ್​ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ ಅನ್ನೋದು ಗಮನಾರ್ಹ.

ಇಂಡಿಯಾ ಟುಡೇ ವರದಿ ಪ್ರಕಾರ ರೋಬೋಟ್​​​ ಸೌತ್​ ಕೊರಿಯಾದ ಗೌಮಿ ನಗರದ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಕೆಲಸ ಮಾಡುತ್ತಿತ್ತು. ಸುಮಾರು ಒಂದು ವರ್ಷದಿಂದ ರೋಬೋಟ್​​​ ಆಡ್ಮಿನಿಸ್ಟ್ರೇಷನ್​​​ ಕೆಲಸದ ಭಾಗವಾಗಿತ್ತು.

5 ದಿನಗಳ ಹಿಂದೆ ರೋಬೋಟ್​​ ಮೆಟ್ಟಿಲುಗಳ ಮೇಲಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ. ರೋಬೋಟ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರ್ಕಿಂಗ್​ ಕಂಡೀಷನ್​ನಲ್ಲಿ ಇರಲಿಲ್ಲ. ರೋಬೋಟ್​​​ ಓಡಿ ಹೋಗಿ ಸೂಸೈಡ್​​ ಮಾಡಿಕೊಂಡಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ.

ಹೆಚ್ಚು ಕೆಲಸ ಮಾಡಿಸುತ್ತಿದ್ದ ಕಾರಣ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು. ಇದನ್ನು ಡಿಸೈನ್​ ಮಾಡಿದ ಕಂಪನಿ ಕೂಡ ಅದೇ ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೌತ್​ ಕೊರಿಯಾ ಸರ್ಕಾರಿ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad