Bengaluru 22°C
Ad

ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್ ಸಂಸದೆ

Uk Mp Shivani

ಲಂಡನ್: ಬ್ರಿಟನ್ ಚುನಾವಣೆ ಮುಕ್ತಾಯವಾಗಿದ್ದು, ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ 14 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಚುನಾವಣೆಯಲ್ಲಿ ಭಾರತ ಮೂಲದ 25ಕ್ಕೂ ಅಧಿಕ ಜನರು ಸಂಸದರಾಗಿ ಆಯ್ಕೆಯಾಗಿದ್ದಾರೆ.

Ad
300x250 2

ಇದೀಗ ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಿದ್ದು, ಭಾರತ ಮೂಲದ ಜನಪ್ರತಿನಿಧಿಗಳು ಭಗವದ್ಗೀತೆ ಹಿಡಿದು ಪದಗ್ರಹಣ ಸ್ವೀಕರಿಸುತ್ತಿದ್ದಾರೆ. ಕನ್ಸರ್ವೇಟಿವ್ ಪಾರ್ಟಿಯ ಬಾಬ್ ಬ್ಲಾಕ್‌ಮೆನ್ ಮತ್ತು ಶಿವಾನಿ ರಾಜಾ ಭಗವದ್ಗೀತೆ ಜೊತೆಯಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪದಗ್ರಹಣದ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶಿವಾನಿ ರಾಜಾ ವಿರುದ್ಧ ಭಾರತ ಮೂಲದ ರಾಜೇಶ್ ಅಗರ್ವಾಲ್ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪೂರ್ವ ಲೀಸೆಸ್ಟರ್ ಕ್ಷೇತ್ರದ ಪ್ರತಿನಿಧಿಯಾಗಿ  ಶಪಥ ಸ್ವೀಕರಿಸಲು ಖುಷಿ ಮತ್ತು ಹೆಮ್ಮೆಯಾಗುತ್ತಿದೆ. ಭಗದ್ವೀತೆ ಮತ್ತು ರಾಜಾ ಚಾರ್ಲ್ಸ್ ಪ್ರಮಾಣವಾಗಿ ಪದಗ್ರಹಣ ಸ್ವೀಕರಿಸಿದ್ದೇನೆ ಎಂದು ಶಿವಾನಿ ರಾಜಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಶಿವಾನಿ ರಾಜಾ 14,526 ಮತಗಳನ್ನು ಪಡೆಯುವ ಮೂಲಕ ಲಂಡನ್ ಮಾಜಿ ಉಪ ಮೇಯರ್ ರಾಜೇಶ್ ಅಗರ್ವಾಲ್ ಅವರನ್ನು ಸೋಲಿಸಿದ್ದಾರೆ. ರಾಜೇಶ್ ಅಗರ್ವಾಲ್ 10,100 ಮತ ಪಡೆದುಕೊಂಡಿದ್ದಾರೆ. 1987ರಿಂದ ಪೂರ್ವ ಲೀಸೆಸ್ಟರ್‌ ಕ್ಷೇತ್ರ ಲೇಬರ್ ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 37 ವರ್ಷದ ಬಳಿಕ ಮೊದಲ ಬಾರಿಗೆ ಬೇರೆ ಪಕ್ಷವೊಂದು ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ.

Ad
Ad
Nk Channel Final 21 09 2023
Ad