Bengaluru 23°C
Ad

ಸಿಂಗಲ್ಸ್​​​ಗಳಿಗಾಗಿ ಡೇಟಿಂಗ್ ಆ್ಯಪ್ ಬಿಡುಗಡೆ ಮಾಡಿದ ಜಪಾನ್​​​ ಸರ್ಕಾರ

ಸಿಂಗಲ್ಸ್​​​ಗಳಿಗಾಗಿ ಡೇಟಿಂಗ್ ಆ್ಯಪ್ ನ್ನು ಜಪಾನ್​​​ ಸರ್ಕಾರ ಇದೀಗ ಬಿಡುಗಡೆ ಮಾಡಿದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, 2060ರ ಹೊತ್ತಿಗೆ, ಜಪಾನ್‌ನ ಪ್ರಸ್ತುತ 125 ಮಿಲಿಯನ್ ಜನಸಂಖ್ಯೆಯು ಕೇವಲ 86.7 ಮಿಲಿಯನ್‌ಗೆ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ.

ಜಪಾನ್ : ಸಿಂಗಲ್ಸ್​​​ಗಳಿಗಾಗಿ ಡೇಟಿಂಗ್ ಆ್ಯಪ್ ನ್ನು ಜಪಾನ್​​​ ಸರ್ಕಾರ ಇದೀಗ ಬಿಡುಗಡೆ ಮಾಡಿದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, 2060ರ ಹೊತ್ತಿಗೆ, ಜಪಾನ್‌ನ ಪ್ರಸ್ತುತ 125 ಮಿಲಿಯನ್ ಜನಸಂಖ್ಯೆಯು ಕೇವಲ 86.7 ಮಿಲಿಯನ್‌ಗೆ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ.

50 ವರ್ಷ ವಯಸ್ಸಿನ ಸುಮಾರು 32 ಪ್ರತಿಶತದಷ್ಟು ಪುರುಷರು ಮತ್ತು 24 ಪ್ರತಿಶತ ಮಹಿಳೆಯರು ಅವಿವಾಹಿತರಾಗಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯನ್ನು ಇದೀಗ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದ್ದು, ಈ ಮೂಲಕ ಯುವಜನತೆಯನ್ನು ಮದುವೆಯತ್ತ ಪ್ರೇರೇಪಿಸುತ್ತಿದೆ.

ಇಳಿಸುತ್ತಿರುವ ಜನನ ಪ್ರಮಾಣವನ್ನು ಏರಿಕೆಯತ್ತ ಕೊಂಡೊಯ್ಯಲು ಟೋಕಿಯೋ ಫುಟಾರಿ ಸ್ಟೋರಿ ಹೆಸರಿನ ಡೇಟಿಂಗ್ ಅಪ್ಲಿಕೇಶನ್ ಜಾರಿಗೆ ತಂದಿದೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದಲ್ಲದೆ ಮದುವೆಯಾಗಲು ಮತ್ತು ಮಗು ಹೊಂದಲು ಬಯಸುವವರಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ ಎಂದರು.

Ad
Ad
Nk Channel Final 21 09 2023
Ad