News Karnataka Kannada
Tuesday, April 30 2024
ವಿದೇಶ

ಇಸ್ರೋ ಲಾಂಚ್‌ ಪ್ಯಾಡ್‌ ತಯಾರಿಸಿದ ತಂತ್ರಜ್ಞ ಇದೀಗ ಇಡ್ಲಿ ವ್ಯಾಪಾರಿ

Idli Jana
Photo Credit : News Kannada

ನವದೆಹಲಿ: ಇಸ್ರೋದ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ನ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ ಅವರು ಇದೀಗ ರಾಂಚಿಯ ರಸ್ತೆಬದಿಯ ಕ್ಯಾಂಟೀನ್‌ ನಡೆಸುತ್ತಿದ್ದು ಇಡ್ಲಿ ಮಾರುತ್ತಿದ್ದಾರೆ. ಹೌದು ಬಿಬಿಸಿ ವರದಿ ಪ್ರಕಾರ, ಲಾಂಚ್‌ ಪ್ಯಾಡ್‌ ನಿರ್ಮಾಣ ತಂಡದಲ್ಲಿದ್ದ ಉಪ್ರಾರಿಯಾ ಅವರು ರಾಂಚಿಯ ಧುರ್ವಾ ಪ್ರದೇಶದಲ್ಲಿ ಕ್ಯಾಂಟೀನ್‌ ತೆರೆದಿದ್ದಾರೆ. ಚಂದ್ರಯಾನ-3 ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ಅನ್ನು ತಯಾರಿಸಿದ HEC -( ಭಾರತ ಸರ್ಕಾರದ ಕಂಪನಿ) ಯಲ್ಲಿ ಉಪ್ರಾರಿಯಾ ಉದ್ಯೋಗದಲ್ಲಿದ್ದು, ಕಳೆದ 18 ತಿಂಗಳಿನಿಂದ ಕಂಪನಿ ಸಂಬಳ ಪಾವತಿಸಿಲ್ಲ. ಇದರಿಂದ ತೀವ್ರ ಹಣಕಾಸು ಮುಗ್ಗಟ್ಟು ಅನುಭವಿಸಿದ ಅವರು ಇದೀಗ ರಸ್ತೆ ಬದಿಯಲ್ಲಿ ಇಡ್ಲಿ ಕ್ಯಾಂಟೀನ್‌ ತೆರೆದಿದ್ದಾರೆ.

ಭಾರತದ ಚಂದ್ರಯಾನ-3 ಯಶಸ್ವಿಯಾಗಿದ್ದು, ಭಾರತದ ವಿಜ್ಞಾನಿಗಳು, ತಂತ್ರಜ್ಞರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು ಅಲ್ಲದೆ ಲಾಂಚ್‌ ಪ್ಯಾಡ್‌ ತಯಾರಿಸಿದ ಕಾರ್ಮಿರನ್ನು ಹೊಗಳಿದ್ದರು. ಇದೇ ಎಚ್‌ಇಸಿಯ ನೌಕರರು ಲಾಂಚ್‌ ಪ್ಯಾಡ್‌ ತಯಾರಿಸಿದ್ದು, ಅವರಿಗೆ ಇದುವರೆಗೆ ಸಂಬಳ ದೊರೆತಿಲ್ಲ ಎಂದು ಬಿಬಿಸಿ ವರದಿ ಮಾಡಿದೆ. ಸಂಬಳ ದೊರೆಯದ ಬಗ್ಗೆ ರಾಂಚಿಯ ಎಚ್‌ಇಸಿ ನೌಕರರು ಪ್ರತಿಭಟನೆಯನ್ನು ಕೂಡ ನಡೆಸಿದ್ದರು.

ಇಡ್ಲಿ ಮಾರಾಟದಿಂದ 100 ರೂ. ಗಳಿಕೆ: ಎಚ್‌ಇಸಿಯ ಸುಮಾರು 2800 ನೌಕರರು ಸಂಬಳವಿಲ್ಲದೆ ಕೊರಗುತ್ತಿದ್ದು, ಈ ಪೈಕಿ ಉಪ್ರಾರಿಯಾ ಕೂಡ ಸೇರಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಉಪ್ರಾರಿಯಾ, ನಾನು ನನ್ನ ಕ್ಯಾಂಟೀನ್‌ ಮತ್ತು ಕಚೇರಿ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದೇನೆ. ಬೆಳಿಗ್ಗೆ ಇಡ್ಲಿ ಮಾರುತ್ತೇನೆ, ಮಧ್ಯಾಹ್ನ ನಂತರ ಕಚೇರಿಗೆ ಹೋಗುತ್ತೇನೆ. ಸಂಬಳ ದೊರೆಯದ ಕಾರಣ ಮೊದಲು ನಾನು 2 ಲಕ್ಷ ರೂ. ಸಾಲ ಪಡೆದು ಮನೆ ನಿರ್ವಹಿಸಲು ಆರಂಭಿಸಿದೆ. ಬಳಿಕವೂ ಸಂಬಳ ಪಾವತಿಯಾಗದ ಕಾರಣ ಸಾಲ ಮರುಪಾವತಿ ಸಾಧ್ಯವಾಗಲಿಲ್ಲ. ಸಾಲಪಡೆದ ಸಂಸ್ಥೆ ನನ್ನನ್ನು ಡಿಫಾಲ್ಟರ್‌ ಎಂದು ಘೋಷಿಸಿತು. ಈಗ ಸಂಬಂಧಿಕರು, ಪರಿಚಯಸ್ಥರು ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನರು ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ಪ್ರಸ್ತುತ ಅನಿವಾರ್ಯವಾಗಿ ಇಡ್ಲಿ ಮಾರುತ್ತಿದ್ದೇನೆ. ಹೆಂಡತಿ ರುಚಿಕರವಾದ ಇಡ್ಲಿ ಮಾಡುತ್ತಾಳೆ. ನಾನು ಅದನ್ನು ಮಾರಾಟ ಮಾಡುತ್ತಿದ್ದು ಪ್ರತಿದಿನ 300 ರಿಂದ 400 ರೂಪಾಯಿ ಸಿಗುತ್ತದೆ. ಇದರಿಂದ ಪ್ರತಿದಿನ 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯನ್ನು ನಡೆಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು