ನೊಯ್ಡಾ: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಆಕೆ ನೋಯ್ಡಾ ಸೆಕ್ಟರ್ 25ರ ಬಳಿ ಎಲಿವೇಟೆಡ್ ರಸ್ತೆಯ ಪಿಲ್ಲರ್ ಮೇಲೆ ಬಿದ್ದಿದ್ದಾಳೆ. ಸ್ವಲ್ಪ ಆಚೀಚೆಯಾಗಿದ್ದರೂ ಆಕೆ ಫ್ಲೈಓವರ್ನಿಂದ ಕೆಳಗಿನ ರಸ್ತೆಗೆ ಬೀಳುತ್ತಿದ್ದಳು. ಅದೃಷ್ಟವಶಾತ್ ಪಿಲ್ಲರ್ ಮೇಲೆ ಸಿಲುಕಿಕೊಂಡಿದ್ದಾಳೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಯನ್ನು ರಕ್ಷಿಸಲು ಯತ್ನಿಸುತ್ತಿದ್ದ ಇಬ್ಬರನ್ನೂ ಸೇರಿದಂತೆ ಒಟ್ಟು ಮೂವರನ್ನು ಕ್ರೇನ್ ಸಹಾಯದಿಂದ ಕೆಳಗೆ ಇಳಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕೆಯ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Ad