Bengaluru 27°C

ಬಾಂಗ್ಲಾ : ನಿರ್ಮಾಪಕ ಹಾಗೂ ನಟನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದ ಜನ

ಬಾಂಗ್ಲಾದೇಶದಲ್ಲಿ ಹಿಂಸಚಾರಾದ ತೀವ್ರತೆ ಮುಂದುವರೆದಿದ್ದು ಇದುವರೆಗೂ 200 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ.

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಹಿಂಸಚಾರಾದ ತೀವ್ರತೆ ಮುಂದುವರೆದಿದ್ದು ಇದುವರೆಗೂ 200 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಇದರಿಂದ ಅಲ್ಲಿಯ ಪ್ರಧಾನ ಮಂತ್ರಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.  ಆಗಸ್ಟ್ 05 ರಂದು ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದು ಹಾಕಿದ್ದಾರೆ. ಪೊಲೀಸರಿಗೆ ವಿಷಯ ತಿಳಿದರೂ ಸಹ ಹೋಗಿ ಕಾಪಾಡಲು ಆಗಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.


ಸಿನಿಮಾ ನಿರ್ಮಾಪಕ ಸಲೀಂ ಖಾನ್ ಹಾಗೂ ಅವರ ಪುತ್ರ ಶಾಂತಾ ಖಾನ್ ಅನ್ನು ಚಾಂದ್​ಪುರ ಉಪ ಜಿಲ್ಲೆ ಪ್ರದೇಶದ ಬಜಾರ್​ನಲ್ಲಿ ಜನ ಕಟ್ಟಿಗೆಗಳಿಂದ ಕೈಗೆ ಸಿಕ್ಕಿದ ಆಯುಧಗಳಿಂದ ಭೀಕರವಾಗಿ ಹೊಡೆದು ಕೊಂದು ಹಾಕಿದ್ದಾರೆ. ಇವರು ಕೂಡ ಅಲ್ಲಿಂದ ಪಲಾಯನ ಮಾಡಬೇಕನ್ನುವಷ್ಟರಲ್ಲಿ ದುರಂತ ಸಂಭವಿಸಿ.


Nk Channel Final 21 09 2023