Bengaluru 29°C
Ad

ವಿಮಾನ ಪತನ : ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸಹಿತ 10 ಮಂದಿ ಮೃತ್ಯು

ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಒಂಬತ್ತು ಮಂದಿ ಇತರರು ಇಂದು ವಿಮಾನ ದುರಂತವೊಂದರಲ್ಲಿ ಮೃತಪಟ್ಟಿದ್ದಾರೆಂದು ದೇಶದ ಅಧ್ಯಕ್ಷರ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಹೊಸದಿಲ್ಲಿ: ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಒಂಬತ್ತು ಮಂದಿ ಇತರರು ಇಂದು ವಿಮಾನ ದುರಂತವೊಂದರಲ್ಲಿ ಮೃತಪಟ್ಟಿದ್ದಾರೆಂದು ದೇಶದ ಅಧ್ಯಕ್ಷರ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಸೌಲೋಸ್ ಮತ್ತಿತರರು ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿತ್ತೆಂದು ಈ ಹಿಂದೆ ವರದಿಯಾಗಿತ್ತು. ಸತತ ಶೋಧ ಕಾರ್ಯಾಚರಣೆಯ ನಂತರ ವಿಮಾನವು ಚಕಿಂಗವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವಿಮಾನಲ್ಲಿದ್ದ ಎಲ್ಲಾರೂ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮಲಾವಿ ಉಪಾಧ್ಯಕ್ಷ ಚಿಲಿಮಾ ಅವರು ಸ್ಥಳೀಯ ಕಾಲಮಾನ 09 : 17ಕ್ಕೆ ರಾಜಧಾನಿ ಲಿಲಾಂಗ್ವೆಯಿಂದ ಮಲಾವಿ ರಕ್ಷಣಾ ಪಡೆಯ ವಿಮಾನದಲ್ಲಿ ಹೊರಟಿದ್ದರು ಎನ್ನಲಾಗಿದೆ. ವಿಮಾನ ಕಣ್ಮರೆಯಾತ್ತಿದ್ದಂತೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಹೇಳಿಕೆ ತಿಳಿಸಿದ್ದವು.

 

Ad
Ad
Nk Channel Final 21 09 2023
Ad