ಇಸ್ಲಾಮಾಬಾದ್: ಪಾಕಿಸ್ತಾನದ ನೆಲದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಹಿರಿಯ ಭದ್ರತಾ ಸಿಬ್ಬಂದಿಯೊಬ್ಬರು ಹೇಳುವ ಪ್ರಕಾರ ಪಾಕಿಸ್ತಾನದ ಪ್ರದೇಶವೊಂದರಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಕಂಡು ಬಂದಿದೆ. ಈ ಒಂದು ವರದಾನದಿಂದ ಪಾಕಿಸ್ತಾನ ಶೀಘ್ರದಲ್ಲಿಯೇ ತನ್ನ ಆರ್ಥಿಕ ದುಸ್ಥಿತಿಯಿಂದ ಹೊರಬರಲಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ತನ್ನ ಮಿತ್ರ ರಾಷ್ಟ್ರಗಳ ಜೊತೆಗೂಡಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಸರ್ವೇಗಳನ್ನು ನಡೆಸುತ್ತಲೇ ಇತ್ತು. ಸದ್ಯ ಈಗ ಪಾಕಿಸ್ತಾನ ಹೇಳಿಕೊಂಡಿರುವ ಪ್ರಕಾರ ತನ್ನ ಕರಾಚಿ ಸಮುದ್ರದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.
ಅದು ಎಷ್ಟು ಅಪಾರ ಪ್ರಮಾಣವೆಂದರೆ ಪಾಕಿಸ್ತಾನ ಇಂಧನವಿರುವ ಪತ್ತೆ ಮಾಡಿದ ಜಾಗದಲ್ಲಿ ತೈಲ ಉತ್ಪಾದನೆಯ ಅತಿದೊಡ್ಡ ನಾಲ್ಕನೇ ರಾಷ್ಟ್ರವಾಗಿ ಪಾಕಿಸ್ತಾನ ಹೊರಹೊಮ್ಮುವಷ್ಟು ಪೆಟ್ರೋಲಿಯಂ ರಿಸರ್ವ್ ಇದೆ ಎಂದು ಹೇಳಲಾಗುತ್ತಿದೆ.
ಕೆಲವು ತಜ್ಞರು ಹೇಳುವ ಪ್ರಕಾರ ಸ್ವಲ್ಪ ನಿಧಾನಿಸಿ ಆತುರ ಬೇಡ. ಪಾಕಿಸ್ತಾನ ಇಷ್ಟು ಅಪಾರ ಪ್ರಮಾಣದ ತೈಲ ಉತ್ಪನ್ನ ತನ್ನ ನೆಲದಲ್ಲಿ ಹೊಂದಿದೆ ಎಂದು ಈಗಲೇ ಘೋಷಿಸುವುದು ಅವಸರದ ಕೆಲಸ ಇನ್ನೂ ಆಗಬೇಕಾದ ಕಾರ್ಯಗಳು ತುಂಬಾ ಇವೆ ನಿಧಾನಿಸಿ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಅನ್ನುವ ರೀತಿ. ತೀವ್ರ ಆರ್ಥಿಕ ಹೊಡೆತದಿಂದ ಬಳಲಿ ಬೆಂಡಾಗಿರುವ ಪಾಕ್ಗೆ ಈ ಒಂದು ಸುದ್ದಿ ಹೊಸ ಆಶಾಭಾವವನ್ನು ಹುಟ್ಟಿಸಿದೆ.