Bengaluru 25°C
Ad

5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ : ಬಾಂಗ್ಲಾ ಹಿಂದೂಗಳಿಗೆ ಬೆದರಿಕೆ

ಬಾಂಗ್ಲಾದೇಶದಲ್ಲಿ  ದುರ್ಗಾ ಪೂಜೆಯ  ಸಂದರ್ಭದಲ್ಲಿ ಕೋಮುಗಲಭೆ ಉಂಟಾಗಬಹುದೆಂಬ ಆತಂಕದ ನಡುವೆ, ಕೆಲವು ದೇವಾಲಯಗಳಿಗೆ ಇಸ್ಲಾಮಿಸ್ಟ್ ಗುಂಪುಗಳಿಂದ ಸುಲಿಗೆ ಬೆದರಿಕೆ ಪತ್ರಗಳು ಬಂದಿವೆ.
ಢಾಕಾ: ಬಾಂಗ್ಲಾದೇಶದಲ್ಲಿ  ದುರ್ಗಾ ಪೂಜೆಯ  ಸಂದರ್ಭದಲ್ಲಿ ಕೋಮುಗಲಭೆ ಉಂಟಾಗಬಹುದೆಂಬ ಆತಂಕದ ನಡುವೆ, ಕೆಲವು ದೇವಾಲಯಗಳಿಗೆ ಇಸ್ಲಾಮಿಸ್ಟ್ ಗುಂಪುಗಳಿಂದ ಸುಲಿಗೆ ಬೆದರಿಕೆ ಪತ್ರಗಳು ಬಂದಿವೆ.
ಖುಲ್ನಾ ನಗರದ ಡಕೋಪ್‍ನಲ್ಲಿರುವ 25ಕ್ಕೂ ಹೆಚ್ಚು ದೇವಾಲಯಗಳಿಗೆ ಐದು ದಿನಗಳ ಹಬ್ಬವನ್ನು ಆಚರಿಸಲು 5 ಲಕ್ಷ ರೂ. ಬೆದರಿಕೆ ಹಾಕಲಾಗಿದೆ. ಸುಲಿಗೆ ಬೆದರಿಕೆಗಳ ವಿರುದ್ಧ ದೇವಾಲಯ ಸಮಿತಿಗಳು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರ ಮೇಲೆ ಯಾವುದೇ ವಿಶ್ವಾಸವಿಲ್ಲ ಎಂದು ಪೂಜಾ ಸಮಿತಿಗಳು ಹೇಳಿಕೊಂಡಿವೆ. ಬೆದರಿಕೆಯ ಕಾರಣ, ಕೆಲವು ಪೂಜಾ ಸಮಿತಿಗಳು ಆಚರಣೆಯನ್ನು ರದ್ದುಗೊಳಿಸಿವೆ ಎಂದು ವರದಿಯಾಗಿದೆ.
ಅಕ್ಟೋಬರ್ 9 ರಿಂದ 13 ರವರೆಗೆ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ. ಕಳೆದ 2023ಕ್ಕೆ ಹೋಲಿಸಿದರೆ ಬಾಂಗ್ಲಾದೇಶದಲ್ಲಿ ಈ ವರ್ಷ ಹೆಚ್ಚಿನ ಪೂಜಾ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿತ್ತು.
Ad
Ad
Nk Channel Final 21 09 2023