Ad

ಆರ್ಥಿಕ ಬಿಕ್ಕಟ್ಟು: ದುಡ್ಡಿಗಾಗಿ ಕತ್ತೆಗಳ ಮಾರಾಟಕ್ಕೆ ಮುಂದಾದ ಪಾಕಿಸ್ತಾನ

ತೀವ್ರವಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿರೋ ಪಾಕಿಸ್ತಾನವು ಇತ್ತೀಚೆಗೆ ತನ್ನ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಆರ್ಥಿಕತೆಯಲ್ಲಿ ಜಾನುವಾರುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ತೀವ್ರವಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿರೋ ಪಾಕಿಸ್ತಾನವು ಇತ್ತೀಚೆಗೆ ತನ್ನ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಆರ್ಥಿಕತೆಯಲ್ಲಿ ಜಾನುವಾರುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

Ad
300x250 2

ಆರ್ಥಿಕ ಸಮೀಕ್ಷೆಯು ದನ, ಎಮ್ಮೆ, ಕುರಿ, ಆಡುಗಳು, ಒಂಟೆಗಳು, ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳು ಸೇರಿದಂತೆ ಎಲ್ಲಾ ಜಾನುವಾರು ಜನಸಂಖ್ಯೆಯ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತದೆ.

ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ದೇಶದ ಕೃಷಿ ಚಟುವಟಿಕೆಗಳಲ್ಲಿ ಭರವಸೆಯ ಬೆಳವಣಿಗೆಯಾಗುತ್ತಿದೆ.

2022-23ರಲ್ಲಿ 5.9 ಮಿಲಿಯನ್‌ ನಷ್ಟಿದ್ದ ಕತ್ತೆಗಳು ಒಂದು ವರ್ಷದಲ್ಲಿ ಎರಡು ಲಕ್ಷಕ್ಕೆ ಹೆಚ್ಚಳ ಕಂಡಿದೆ. ವರದಿ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ಜನಸಂಖ್ಯೆಯು 5.9 ಮಿಲಿಯನ್ ತಲುಪಲು 1.72% ರಷ್ಟು ಹೆಚ್ಚಾಗಿದೆ.

ಪಾಕಿಸ್ತಾನದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ಚೀನಾಕ್ಕೆ ಸಾಗಾಟ ಮಾಡಲಾಗುತ್ತಿದೆಯಂತೆ. 2022ರಲ್ಲಿ ಚೀನಾ ಪಾಕಿಸ್ತಾನದಿಂದ ಕತ್ತೆ ಮತ್ತು ನಾಯಿಗಳನ್ನು ಆಮದು ಮಾಡಿಕೊಳ್ಳಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ವರದಿಯೊಂದು ಹೇಳಿದೆ.

ಚೀನಾದ ಸಾಂಪ್ರದಾಯಿಕ ಔಷಧಕ್ಕೆ ಪ್ರತಿ ವರ್ಷ ಲಕ್ಷಾಂತರ ಕತ್ತೆಗಳು ಬಲಿಯಾಗುತ್ತಿದೆ. ಹೀಗಾಗಿ ಕತ್ತೆ ಚರ್ಮದಿಂದ ಹೊರತೆಗೆಯಲಾಗುವ ಕಾಲಜನ್ ಬಳಸಿ ತಯಾರಿಸಲಾದ ಇ-ಜಿಯಾವೊ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ಪ್ರಮುಖ ಅಂಶವಾಗಿದೆ.

ಈ ಔಷಧವು ರಕ್ತವನ್ನು ಸಮೃದ್ಧಗೊಳಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಜೊತೆಗೆ ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ. ಹೀಗಾಗಿ ಚೀನಾವು ಬೇರೆ ಬೇರೆ ದೇಶಗಳಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿದಯಂತೆ. ಅಲ್ಲದೇ ಪಾಕಿಸ್ತಾನವು ತನ್ನ ಸ್ನೇಹಿತ ರಾಷ್ಟ್ರವಾದ ಚೀನಾದಿಂದ ಈ ಮೂಲಕ ಸ್ವಲ್ಪ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.

Ad
Ad
Nk Channel Final 21 09 2023
Ad