Categories: ವಿದೇಶ

ಬ್ರಿಸ್ಬೇನ್‌ನಲ್ಲಿ ಹೊಸ ದೂತಾವಾಸ ಕಚೇರಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಸಿಡ್ನಿ: ಬ್ರಿಸ್ಬೇನ್‌ನಲ್ಲಿ ಶೀಘ್ರದಲ್ಲೇ ಹೊಸ ದೂತಾವಾಸವನ್ನು ತೆರೆಯಲಾಗುವುದು ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದೇ ವೇಳೆ ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್ ಅನ್ನು ‘ಲಿಟಲ್ ಇಂಡಿಯಾ’ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಆಸ್ಟ್ರೇಲಿಯನ್ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕ್ಯುಡೋಸ್ ಬ್ಯಾಂಕ್ ಅರೆನಾ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯದ 20 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಬ್ರಿಸ್ಬೇನ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು ಎಂದರು. ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್ ಅನ್ನು ‘ಲಿಟಲ್ ಇಂಡಿಯಾ’ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌ಗೆ ಧನ್ಯವಾದ ಅರ್ಪಿಸಿದರು. ಹ್ಯಾರಿಸ್ ಪಾರ್ಕ್ ಅನ್ನು ‘ಲಿಟಲ್ ಇಂಡಿಯಾ’ ಎಂದು ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ಹ್ಯಾರಿಸ್ ಪಾರ್ಕ್ ಲಿಟಲ್‌ ಇಂಡಿಯಾ: ಹ್ಯಾರಿಸ್ ಪಾರ್ಕ್ ಅನೇಕ ಜನಪ್ರಿಯ ಭಾರತೀಯ ತಿನಿಸುಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನೆಲೆಯಾಗಿದೆ, ಹ್ಯಾರಿಸ್ ಪಾರ್ಕ್ ಅನ್ನು ಅನೌಪಚಾರಿಕವಾಗಿ ‘ಲಿಟಲ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ಈ ಪ್ರದೇಶದ 5,043 ನಿವಾಸಿಗಳಲ್ಲಿ 45 ಪ್ರತಿಶತದಷ್ಟು ಜನರು ಭಾರತ ಮೂಲದವರು. ಪಶ್ಚಿಮ ಸಿಡ್ನಿ ಉಪನಗರದಲ್ಲಿರುವ ಡಯಾಸ್ಪೊರಾ ಸಮುದಾಯವು ತಮ್ಮ ಪ್ರದೇಶವನ್ನು ‘ಲಿಟಲ್ ಇಂಡಿಯಾ’ ಎಂದು ಘೋಷಿಸುವಂತೆ ಕರೆ ನೀಡಿದೆ.
ಆಸ್ಟ್ರೇಲಿಯನ್ ಸರ್ಕಾರದ ವೆಬ್‌ಸೈಟ್‌ನ ಪ್ರಕಾರ, ಹ್ಯಾರಿಸ್ ಪಾರ್ಕ್‌ನಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಭಾರತೀಯ ಮೂಲದವರ ಸಣ್ಣ ಮತ್ತು ಮಧ್ಯಮ ಗಾತ್ರದ ಹಲವು ಉದ್ಯಮಗಳು ಈ ಪ್ರದೇಶದಲ್ಲಿವೆ.

Umesha HS

Recent Posts

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

7 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

7 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

8 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

8 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

8 hours ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

9 hours ago