ನುವಾಕೋಟ್: ನೇಪಾಳದ ನುವಾಕೋಟ್ನಲ್ಲಿ ಇಂದು(ಅಗಷ್ಟ್ 7) ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಶಿವಪುರಿಯಲ್ಲಿ ಅಪಘಾತಕ್ಕೀಡಾಗಿದೆ. ಐದು ಜನರನ್ನ ಹೊತ್ತ ಹೆಲಿಕಾಪ್ಟರ್ ಸ್ಯಾಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ವರದಿಯಾಗಿದೆ.
ವಿಮಾನದಲ್ಲಿ ನಾಲ್ವರು ಚೀನೀ ಪ್ರಜೆಗಳಿದ್ದರು ಎಂದು ತ್ರಿಭುವನ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯನ್ನ ಉಲ್ಲೇಖಿಸಿ ವರದಿ ಮಾಡಿದೆ. ಬೆಳಿಗ್ಗೆ ಕಠ್ಮಂಡುವಿನಿಂದ ಹೊರಟ ಹೆಲಿಕಾಪ್ಟರ್’ನ್ನ ಅನುಭವಿ ಪೈಲಟ್ ಹಾರಿಸಿದ್ದಾರೆ. ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿದರು. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ) ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವು ಹೆಲಿಕಾಪ್ಟರ್ ಮಧ್ಯಾಹ್ನ 1.54ಕ್ಕೆ ಕಠ್ಮಂಡುವಿನಿಂದ ಹೊರಟಿತ್ತು ಎಂದು ಹೇಳಿದೆ. ಸೂರ್ಯ ಚೌರ್ ತಲುಪಿದ ನಂತರ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕ ಕಳೆದುಕೊಂಡಿತು.