Bengaluru 27°C
Ad

ಡೆನ್ಮಾರ್ಕ್‌ನ ಪ್ರಧಾನಿ ಮೇಲಿನ ದಾಳಿಯನ್ನು ಖಂಡಿಸಿದ ನರೇಂದ್ರ ಮೋದಿ

ಕೋಪನ್ ಹ್ಯಾಗನ್​​ನಲ್ಲಿ ವ್ಯಕ್ತಿಯೊಬ್ಬ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರಿಗೆ ಢಿಕ್ಕಿ ಹೊಡೆದು ನಡೆಸಿದ ದಾಳಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಮೇಲಿನ ದಾಳಿಯನ್ನು ಖಂಡಿಸುತ್ತೇವೆ. ನನ್ನ ಸ್ನೇಹಿತರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿ  : ಕೋಪನ್ ಹ್ಯಾಗನ್​​ನಲ್ಲಿ ವ್ಯಕ್ತಿಯೊಬ್ಬ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರಿಗೆ ಢಿಕ್ಕಿ ಹೊಡೆದು ನಡೆಸಿದ ದಾಳಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಮೇಲಿನ ದಾಳಿಯನ್ನು ಖಂಡಿಸುತ್ತೇವೆ. ನನ್ನ ಸ್ನೇಹಿತರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಥಳೀಯ ಮಾಧ್ಯಮವು ಕೋಪನ್‌ಹೇಗನ್‌ನಲ್ಲಿರುವ ಸೆಂಟ್ರಲ್ ಪಿಯಾಜಾವಾದ ಕಲ್ಟೋರ್ವೆಟ್ ಸ್ಕ್ವೇರ್ ಅನ್ನು ಹಾದುಹೋಗುವಾಗ ವ್ಯಕ್ತಿಯೊಬ್ಬ ಫ್ರೆಡೆರಿಕ್ಸೆನ್ ಅವರನ್ನು ಬಲವಂತವಾಗಿ ತಳ್ಳಿದನು ಎಂದು ವರದಿ ಮಾಡಿದೆ. ದಾಳಿಗೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡ್ಯಾನಿಶ್ ಪ್ರಧಾನಿಗೆ ಕುತ್ತಿಗೆ ನೋವು ಆಗಿದ್ದು. ಘಟನೆಯ ನಂತರ ಅವರು ಚೆನ್ನಾಗಿದ್ದಾರೆ ಎಂದು ಅವರ ಕಚೇರಿ ಶನಿವಾರ ಹೇಳಿಕೆಯಲ್ಲಿ ದೃಢಪಡಿಸಿದೆ

 

Ad
Ad
Nk Channel Final 21 09 2023
Ad