ಅಮೆರಿಕಾ: ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಅಮೇರಿಕಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವಾಷಿಂಗ್ಟನ್‌ನ ರಾಯಭಾರ ಕಚೇರಿ ಆವರಣದಲ್ಲಿ ಅವರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆಯ ಪ್ರಕಾರ ಸೆಪ್ಟೆಂಬರ್ 18 ರ ಬುಧವಾರ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಈಗ ಸ್ಥಳೀಯ ಪೊಲೀಸರು ಮತ್ತು ಸಿಕ್ರೇಟ್ ಸರ್ವೀಸ್‌ನಿಂದ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿ ತಾವೇ ಸಾವಿಗೆ ಶರಣಾಗಿರಬಹುದೇ ಅಥವಾ ಇನ್ನೇನಾದರೂ ಘಟನೆ ಸಂಭವಿಸಿರಬಹುದೇ ಎಂದು ತಿಳಿಯಲು ರಾಯಭಾರ ಕಚೇರಿಯ ಅಧಿಕಾರಿಯ ಸಾವನ್ನು ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ಎಂದು ಭಾರತೀಯ ರಾಯಭಾರ ಕಚೇರಿಯೂ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಅತೀವವಾದ ಬೇಸರದೊಂದಿಗೆ, 2024 ರ ಸೆಪ್ಟೆಂಬರ್ 18 ರ ಸಂಜೆ ಭಾರತೀಯ ರಾಯಭಾರ ಕಚೇರಿಯ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಅತೀ ಶೀಘ್ರವಾಗಿ ಭಾರತಕ್ಕೆ ತರಲು ಎಲ್ಲಾ ಸಂಬಂಧಿತ ಏಜೆನ್ಸಿಗಳು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅಧಿಕಾರಿ ಕುಟುಂಬದ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಮೃತರ ಬಗ್ಗೆ ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಈ ದುಃಖದ ಸಮಯದಲ್ಲಿ ನಮ್ಮ ಚಿಂತನೆ ಮತ್ತು ಪ್ರಾರ್ಥನೆಗಳು ಕುಟುಂಬದೊಂದಿಗೆ ಇವೆ ಎಂದು ಭಾರತೀಯ ರಾಯಭಾರ ಕಚೇರಿ ನಿನ್ನೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದು, ಅಧಿಕಾರಿಯ ಯಾರು ಎಂಬ ಬಗ್ಗೆ ವಿವರ ನೀಡಿಲ್ಲ.