Bengaluru 21°C
Ad

ನಾಪತ್ತೆಯಾದ ಮಹಿಳೆ: ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ

ನಾಪತ್ತೆಯಾದ ಮಹಿಳೆಯೊಬ್ಬಳ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾ: ನಾಪತ್ತೆಯಾದ ಮಹಿಳೆಯೊಬ್ಬಳ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದೆ.

45 ವರ್ಷದ ಫರೀದಾ ಮೃತ ದುರ್ದೈವಿ. ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆ ಗುರುವಾರ ರಾತ್ರಿ ಕಾಣೆಯಾಗಿದ್ದಳು. ಮನೆಗೆ ಹೆಂಡತಿ ಹಿಂತಿರುಗದಿರುವುದನ್ನು ಕಂಡು ಆಕೆಯ ಪತಿ ಗಾಬರಿಗೊಂಡಿದ್ದರು. ಕೊನೆಗೆ ಗ್ರಾಮಸ್ಥರು ಸೇರಿ ಹುಡುಕಾಡಿದಾಗ 16 ಅಡಿ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ.

ಕಳೆದ ವರ್ಷ ಆಗ್ನೇಯ ಸಲವೆಸಿಯಾ ಟಿನಾಂಗ್ಜಿಯಾ ಜಿಲ್ಲೆಯಲ್ಲಿ ಇಂತಹದೇ ಘಟನೆ ಬೆಳಕಿಗೆ ಬಂದಿತ್ತು. ಅದೇ ಹಳ್ಳಿಯ ರೈತನೊಬ್ಬನನ್ನು 8 ಮೀಟರ್​ ಉದ್ದದ ಹೆಬ್ಬಾನು ನುಂಗಿ ತೇಗಿತ್ತು.

2018ರಲ್ಲೂ ಇಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿತ್ತು. ಆಗ್ನೇಯ ಸುಲವೆಸಿಯ ಮುನ್ನಾ ಪಟ್ಟಣದಲ್ಲಿ 54 ವರ್ಷದ ಮಹಿಳಯನ್ನು 7 ಮೀಟರ್​ ಉದ್ದ ಹೆಬ್ಬಾವು ತಿಂದಿದೆ.

Ad
Ad
Nk Channel Final 21 09 2023
Ad